ಸಂಗ್ರಹ ಚಿತ್ರ
ಕಲಬುರಗಿ: ಪಶುಸಂಗೋಪನಾ ಹಾಗೂ ಪಶುಪಾಲನಾ ಸೇವಾ ಇಲಾಖೆ ವತಿಯಿಂದ ಚರ್ಮಗಂಟು ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ 2.90 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಡಾ. ಎಸ್.ಡಿ.ಅವಟಿ ತಿಳಿಸಿದ್ದಾರೆ.
ಜೂನ್ 20ರಿಂದ ಶುರುವಾಗಿರುವ ಲಸಿಕಾಕರಣ ಕಾರ್ಯಕ್ರಮವು ಜುಲೈ 20ರ ವರೆಗೆ ನಡೆಯಲಿದೆ. 3.61 ಲಕ್ಷ ಜಾನುವಾರುಗಳ ಪೈಕಿ 2.90 ಲಕ್ಷ ಜನುವಾರುಗಳಿಗೆ ಚರ್ಮಗಂಟು ರೋಗ ತಡೆಗಟ್ಟುವ ಲಸಿಕೆ ಹಾಕಲಾಗಿದೆ. 5.25 ಲಕ್ಷ ಆಡು/ ಕುರಿಗಳ ಪೈಕಿ 4.25 ಲಕ್ಷ ಆಡು/ ಕುರಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬೀದಿ ಬದಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಗುತ್ತಿಗೆ ಆಧಾರದ ಮೇಲೆ ತಾಲ್ಲೂಕಿಗೆ ಒಂದರಂತೆ 11 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು (1962) ನೀಡಲಾಗಿದೆ. ಅವುಗಳ ನಿರ್ವಹಣೆ ಜವಾಬ್ದಾರಿ ಎಜುಸ್ಪಾರ್ಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಹಿಸಿಕೊಂಡಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.