ADVERTISEMENT

ಭಕ್ತರಿಗೆ ಅನ್ನದಾಸೋಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 11:13 IST
Last Updated 3 ಡಿಸೆಂಬರ್ 2021, 11:13 IST
ಚಿತ್ತಾಪುರ ತಾಲ್ಲೂಕಿನ ಮಲಕೂಡ ಗ್ರಾಮದಿಂದ ಘತ್ತರಗಿಯ ಭಾಗ್ಯವಂತಿ ದೇವಸ್ಥಾನವರೆಗೆ ಪಾದಯಾತ್ರೆ ಕೈಗೊಂಡ ಭಕ್ತರಿಗೆ ದಂಡೋತಿ ಗ್ರಾಮದ ಕೋಳಕೂರ ದಂಪತಿ ಸನ್ಮಾನಿಸಿದರು
ಚಿತ್ತಾಪುರ ತಾಲ್ಲೂಕಿನ ಮಲಕೂಡ ಗ್ರಾಮದಿಂದ ಘತ್ತರಗಿಯ ಭಾಗ್ಯವಂತಿ ದೇವಸ್ಥಾನವರೆಗೆ ಪಾದಯಾತ್ರೆ ಕೈಗೊಂಡ ಭಕ್ತರಿಗೆ ದಂಡೋತಿ ಗ್ರಾಮದ ಕೋಳಕೂರ ದಂಪತಿ ಸನ್ಮಾನಿಸಿದರು   

ಚಿತ್ತಾಪುರ: ತಾಲ್ಲೂಕಿನ ಮಲಕೂಡ ಗ್ರಾಮದಿಂದ ಅಫಜಲಪುರ ತಾಲ್ಲೂಕಿನ ಘತ್ತರಗಿಯ ಭಾಗ್ಯವಂತಿ ದೇವಸ್ಥಾನಕ್ಕೆ 25ನೇ ವರ್ಷದ ಪಾದಯಾತ್ರೆ ಕೈಗೊಂಡ ಭಕ್ತರಿಗೆ ಈಚೆಗೆ ದಂಡೋತಿ ಗ್ರಾಮದ ಕೋಳಕೂರ ದಂಪತಿ ಅನ್ನದಾಸೋಹ ಸೇವೆ ನೆರವೇರಿಸಿದರು.

ತಾಲ್ಲೂಕಿನ ತೆಂಗಳಿ ಕ್ರಾಸ್ ಹತ್ತಿರ ಪಾದಯಾತ್ರಿಗಳಿಗೆ ಭಾಗ್ಯವಂತಿ ದೇವಿ ಭಕ್ತರಾದ ಕೋಳಕೂರ ಕುಟುಂಬದ ಕಾಶಿರಾಯ, ಪಾರ್ವತಿ, ಸಾಬಣ್ಣ, ಕಮಲಾಬಾಯಿ ದಂಪತಿ ಅನ್ನದಾಸೋಹ ಸೇವೆಗೈದಿದ್ದಲ್ಲದೆ ಸನ್ಮಾನ ಮಾಡಿ ಬೀಳ್ಕೊಟ್ಟರು.

ಸಾಬಣ್ಣ ಕೋಳಕೂರ, ಈರಣ್ಣ ಕೋಳಕೂರ, ಮುಖಂಡರಾದ ಬಸವರಾಜ ವಾರದ, ಸಾಬಣ್ಣ ಭರಾಟೆ, ವಿ.ಎಸ್.ಎಸ್.ಎನ್ ಕಾರ್ಯದರ್ಶಿ ಮಲ್ಲಿಕಾರ್ಜುನ ತೆಲಂಗಾಣ, ಗುರುಲಿಂಗಪ್ಪ ಯರಗಲ್, ಶ್ರೀಶೈಲ್ ವಿಶ್ವಕರ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಗಮ್ಮ ಕೊಂಕನಳ್ಳಿ, ಇವಣಿ ಗ್ರಾಮ ಪಂಚಾಯಿತಿ ಪಿಡಿಒ ಬೀರಪ್ಪ, ಮಲಕೂಡ ಗ್ರಾಮದ ಮುಖಂಡ ನೀಲಕಂಠಪ್ಪ ನೀಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.