ADVERTISEMENT

ಜಾನಪದ ಪರಿಷತ್ತಿಗೆ ನಾಗಯ್ಯ ಸ್ವಾಮಿ ನೇಮಕ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 12:40 IST
Last Updated 17 ಜುಲೈ 2023, 12:40 IST
ನಾಗಯ್ಯಸ್ವಾಮಿ ಅಲ್ಲೂರ್
ನಾಗಯ್ಯಸ್ವಾಮಿ ಅಲ್ಲೂರ್   

ಚಿತ್ತಾಪುರ: ಸಾಹಿತಿ, ಜಾನಪದ ವಿದ್ವಾಂಸ ಏಚ್.ಎಲ್. ನಾಗೇಗೌಡ ಸ್ಥಾಪಿಸಿದ 44 ವರ್ಷ ಇತಿಹಾಸವಿರುವ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಜಾನಪದ ಸಂಘಟಕರಾದ ನಾಗಯ್ಯ ಸ್ವಾಮಿ ಅಲ್ಲೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ತಿಳಿಸಿದ್ದಾರೆ.

ಪರಿಷತ್ತಿನ ಮಾರ್ಗಸೂಚಿಯಂತೆ ತಾಲ್ಲೂಕಿನ ಜಾನಪದ ಕಾರ್ಯಕ್ರಮಗಳು ಹಮ್ಮಿಕೊಂಡು ಗ್ರಾಮಿಣ ಭಾಗದ ಜಾನಪದ ಕಲಾವಿದರನ್ನು ಗುರುತಿಸಬೇಕು. ಜಾನಪದ ವಿದ್ವಾಂಸರಿಂದ ವಿಚಾರ ಸಂಕಿರಣ, ಉಪನ್ಯಾಸ ಸೇರಿದಂತೆ ನಿರಂತರ ಕಾರ್ಯಕ್ರಮಗಳು ಹಮ್ಮಿಕೊಂಡು ಜಾನಪದ ಪರಿಷತ್ತು ಕ್ರಿಯಾಶೀಲವಾಗಿ ಮಾಡಬೇಕು ಎಂದು ನೇಮಕದ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT