ADVERTISEMENT

ಆಶಾ ಕಾರ್ಯಕರ್ತೆಯರ ಧೈರ್ಯ ಮೆಚ್ಚುವಂಥದ್ದು

₹ 3000 ನೆರವಿನ ಚೆಕ್‌ ನೀಡಿದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:55 IST
Last Updated 7 ಜುಲೈ 2020, 15:55 IST
ಕಲಬುರ್ಗಿಯಲ್ಲಿ ಮಂಗಳವಾರ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಆಶಾ ಕಾರ್ಯಕರ್ತೆಯರಿಗೆ ನೆರವಿನ ಚೆಕ್‌ ನೀಡಿದರು
ಕಲಬುರ್ಗಿಯಲ್ಲಿ ಮಂಗಳವಾರ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಆಶಾ ಕಾರ್ಯಕರ್ತೆಯರಿಗೆ ನೆರವಿನ ಚೆಕ್‌ ನೀಡಿದರು   

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೋವಿಡ್‌ ಹಾವಳಿ ನಿಯಂತ್ರಣ ಮಾಡುವಲ್ಲಿ ಆಶಾ ಕಾರ್ಯಕರ್ತೆಯರು ಹಾಕುತ್ತಿರುವ ಶ್ರಮ ಹಾಗೂ ಧೈರ್ಯ ಮೆಚ್ಚುವಂಥದ್ದು’ ಎಂದು ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಹೇಳಿದರು.

ನಗರದಲ್ಲಿ ಮಂಗಳವಾರ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದ ಅವರು, ‘ರೋಗಿಗಳ ಸೇವೆ ಮಾಡುವಲ್ಲಿ ಆಶಾ ಕಾರ್ಯಕರ್ತೆಯರು ತೋರುತ್ತಿರುವ ಕಾಳಜಿ ಅನುಕರಣೀಯವಾದದ್ದು. ಎಷ್ಟೋ ಸಾರಿ ಹಲ್ಲೆ ಪ್ರಕರಣಗಳು ನಡೆದರೂ ಎದೆಗುಂದದೆ ಕೆಲಸ ಮಾಡುತ್ತಿದ್ದಾರೆ. ಜನರ ಆರೋಗ್ಯದ ಜತೆಗೇ ನಿಮ್ಮ ರಕ್ಷಣೆ ಬಗ್ಗೆಯೂ ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.‌

‘ಜಿಲ್ಲೆಯಲ್ಲಿ 1,847 ಜನ ಆಶಾ ಕಾರ್ಯರ್ತೆಯರಿಗೆ ತಲಾ ₹ 3000 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅಲ್ಲದೇ ಆಟೊ ಚಾಲಕರಿಗೆ, ಕ್ಷೌರಿಕರರು ಸೇರಿ ವಿವಿಧ ಸಮುದಾಯದವರಿಗೆ ರಾಜ್ಯ ಸರ್ಕಾರ ನೆರವು ನೀಡಿದೆ’ ಎಂದರು.

ADVERTISEMENT

‘ಪ್ರಧಾನಿ ಮೋದಿ ಅವರು ಸಕಾಲಿಕ ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ಕೋವಿಡ್ ಪ್ರಮಾಣ ಕಡಿಮೆ ಇದೆ. ಅನ್ಯದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹರಡುವಿಕೆ ಪ್ರಮಾಣ ಅಷ್ಟಾಗಿ ವ್ಯಾಪಿಸಿಲ್ಲ. ಈ ನಿಟ್ಟಿನಲ್ಲಿ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣ ಮುಡಿಪಾಗಿಟ್ಟು ನಮ್ಮ ಸೇವೆ ಮಾಡುತ್ತಿದ್ದಾರೆ’ ಎಂದರು.

‘ಕೋವಿಡ್ ಸಮೀಕ್ಷೆಗೆ ತಮ್ಮ ಮನೆಗೆ ಬಂದ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು. ಅವರು ನಿಮ್ಮ ಒಳ್ಳೆಯದಕ್ಕಾಗಿಯೆ ಶ್ರಮಿಸುತಿದ್ದಾರೆ. ಅವರಿಗೆ ಸಹಕಾರ ನೀಡುವುದು ಅಗತ್ಯ’ ಎಂದೂ ಶಾಸಕರು ಹೇಳಿದರು.

ಈ ಸರಳ ಸಮಾರಂಭದಲ್ಲಿ ಡಾ.ವೇಣುಗೋಪಾಲ, ಡಾ.ಪ್ರಭುಲಿಂಗ ಮಾನಕರ, ಸಿ.ಎಸ್. ನಿಂಬಾಳಕರ, ಮಹಾದೇವ ಬೆಳಮಗಿ, ಸೂರಜ್ ತಿವಾರಿ, ಪ್ರಹ್ಲಾದ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.