ಅಶೋಕ
ಚಿಂಚೋಳಿ (ಕಲಬುರಗಿ): ‘ಬಿಜೆಪಿ ಪಕ್ಷದ ನಾಯಕರ ವಿರುದ್ಧ ಹಲವರು ಬಾಯಿ ಹರಿಬಿಟ್ಟರೂ ಹೈಕಮಾಂಡ್ ಸುಮ್ಮನಾಗಿದ್ದೇಕೆ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಉತ್ತರಿಸದೇ ತೆರಳಿದರು.
ಭಾನುವಾರ ಶಾಸಕ ಡಾ.ಅವಿನಾಶ ಜಾಧವ ಅವರ ಮನೆಯಲ್ಲಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಿಲ್ಲ. ಬದಲಾಗಿ ಜಾರಿಕೊಂಡರು.
‘ಬಿಜೆಪಿಗೆ ಕಾವೇರಿ ವಿಚಾರದಲ್ಲಿ ಇರುವ ಕಾಳಜಿ ಭೀಮಾ, ಕೃಷ್ಣೆಗೇಕಿಲ್ಲ? ಎಂದಾಗಲೂ ಅವರು ಹಾಗೇನಿಲ್ಲ‘ ಎಂದು ಹೇಳುತ್ತಲೇ ಇಂಡಿಯಾ ಕೂಟದ ಪ್ರಣಾಳಿಕೆ ಉದಾಹರಿಸಿ ಕೈತೊಳೆದುಕೊಂಡರು. ಸ್ಪಷ್ಟ ಉತ್ತರ ನೀಡಲಿಲ್ಲ.
‘ಕೋಲಾರ ಸಂಸದ ಮುನಿಸ್ವಾಮಿ, ಮಂಡ್ಯ ಸಂಸದೆ ಸುಮಲತಾ ಅವರನ್ನು ಬಿಜೆಪಿ ಕೈಬಿಡುವುದಿಲ್ಲ. ಅವರನ್ನು ಪಕ್ಷ ಉಳಿಸಿಕೊಳ್ಳುವುದರ ಜತೆಗೆ ಸೂಕ್ತ ಸ್ಥಾನಮಾನ ನೀಡಲಿದೆ’ ಎಂದರು.
‘ರಾಜ್ಯದಲ್ಲಿ 28 ಸ್ಥಾನ ಗೆಲ್ಲು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಎಲ್ಲರಿಗೂ ಸ್ಥಾನ ಸಿಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಇಬ್ಬರನ್ನೂ ಪಕ್ಷ ಗೌರವಯುತವಾಗಿ ನಡೆಸಿಕೊಂಡು ಸ್ಥಾನಮಾನ ನೀಡಲಿದೆ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.