
ಪ್ರಜಾವಾಣಿ ವಾರ್ತೆ
ಚಿಂಚೋಳಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಅವರಿಗೆ ಬೆಂಗಳೂರಿನ ನವಭಾರತ ಉದಯ ಪ್ರತಿಷ್ಠಾನ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಈಚೆಗೆ ಗೌರವಿಸಿದೆ.
ತಾಲ್ಲೂಕು ಸಾಹಿತ್ಯ ಸಮ್ಮೇಳ, ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿಸಿ ನಡೆಸಿದ ಹಗ್ಗಳಿಕೆ ಹೊಂದಿರುವ ಅವರು ಕಸಾಪ ನಿರಂತರ ಚಟುವಟಿಕೆ ನಡೆಸಿದ್ದನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಸಾಹಿತಿ ಹಸೀನಾ ಎಚ್.ಕೆ, ಜಿ.ಬಸವರಾಜು, ಸತೀಶಕುಮಾರ ಹೊಸಮನಿ, ಜಿ.ವೈಪದ್ಮ ನಾಗರಾಜ, ತುಕ್ಕಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.