ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರವಾಣಿ ಸಮುದಾಯ ರೇಡಿಯೊ ಕೇಂದ್ರವು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರೀಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ಸಮುದಾಯ ರೇಡಿಯೊ ಕೇಂದ್ರಗಳು ಭಾಗವಹಿಸಿದ್ದವು.
ತೃತೀಯ ಬಹುಮಾನ ₹50 ಸಾವಿರ ನಗದು, ಪ್ರಶಂಸಾ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಕೇಂದ್ರದ ನಿರ್ದೇಶಕ ಶಿವರಾಜ ಶಾಸ್ತ್ರಿ ಹೇರೂರು ಮಾತನಾಡಿ, ‘ಸುಸ್ಥಿರತೆಯ ಮಾದರಿ ಪ್ರಶಸ್ತಿ’ ವಿಭಾಗದಲ್ಲಿ ನಮ್ಮ ಕೇಂದ್ರಕ್ಕೆ ತೃತೀಯ ಬಹುಮಾನ ಬಂದಿದೆ. 500ಕ್ಕೂ ಅಧಿಕ ಕೇಂದ್ರಗಳ ನಡುವಿನ ಕಠಿಣ ಸ್ಪರ್ಧೆ ಮೆಟ್ಟಿನಿಂತು ನಮ್ಮ ಕೇಂದ್ರ ಪ್ರಶಸ್ತಿ ಪಡೆದುಕೊಂಡಿದೆ’ ಎಂದಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಶಿವರಾಜ ಶಾಸ್ತ್ರಿ ಅವರನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.