ADVERTISEMENT

ಕಲಬುರಗಿ: ಬಹಮನಿ ಸಾಮ್ರಾಜ್ಯದ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 15:36 IST
Last Updated 3 ಆಗಸ್ಟ್ 2024, 15:36 IST
ಬಹಮನಿ ಸಾಮ್ರಾಜ್ಯದ 677ನೇ ಸಂಸ್ಥಾಪನಾ ದಿನದ ಅಂಗವಾಗಿ ಕಲಬುರಗಿಯಲ್ಲಿರುವ ಬಹಮನಿ ಸಾಮ್ರಾಜ್ಯದ ಸಂಸ್ಥಾಪಕ ಅಲಾವುದ್ದೀನ್ ಹಸನ್ ಬಹಮನ್ ಶಾ ಸಮಾಧಿಗೆ ಬಹಮನಿ ಶಾ ಫೌಂಡೇಷನ್‌ ಪದಾಧಿಕಾರಿಗಳು, ಕಲಾವಿದರು ಶನಿವಾರ ಪುಷ್ಪ‌ನಮನ ಸಲ್ಲಿಸಿದರು
ಬಹಮನಿ ಸಾಮ್ರಾಜ್ಯದ 677ನೇ ಸಂಸ್ಥಾಪನಾ ದಿನದ ಅಂಗವಾಗಿ ಕಲಬುರಗಿಯಲ್ಲಿರುವ ಬಹಮನಿ ಸಾಮ್ರಾಜ್ಯದ ಸಂಸ್ಥಾಪಕ ಅಲಾವುದ್ದೀನ್ ಹಸನ್ ಬಹಮನ್ ಶಾ ಸಮಾಧಿಗೆ ಬಹಮನಿ ಶಾ ಫೌಂಡೇಷನ್‌ ಪದಾಧಿಕಾರಿಗಳು, ಕಲಾವಿದರು ಶನಿವಾರ ಪುಷ್ಪ‌ನಮನ ಸಲ್ಲಿಸಿದರು   

ಕಲಬುರಗಿ: ನಗರದಲ್ಲಿರುವ ಬಹಮನಿ ಸಾಮ್ರಾಜ್ಯದ ಸಂಸ್ಥಾಪಕ ಅಲಾವುದ್ದೀನ್ ಹಸನ್ ಬಹಮನ್ ಶಾ ಅವರ ಸಮಾಧಿಗೆ ಶನಿವಾರ ಪುಷ್ಪ‌ನಮನ ಸಲ್ಲಿಸುವ ಮೂಲಕ ಬಹಮನಿ ಸಾಮ್ರಾಜ್ಯದ 677ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

ಬಹಮನಿ ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಬುರಗಿ ನಗರದ ಕಲಾವಿದರು, ಇತಿಹಾಸಕಾರರು, ಬುದ್ಧಿಜೀವಿಗಳು, ಸಮಾಜ ಸೇವಕರು ಪಾಲ್ಗೊಂಡು ಬಹಮನಿ ಅರಸರ ಕೊಡುಗೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

‘ಅಲಾವುದ್ದೀನ್ ಹಸನ್ ಬಹಮನ್ ಶಾ 1347ರ ಆಗಸ್ಟ್ 3ರಂದು ರಾಜನಾಗಿ ಪಟ್ಟಾಭಿಷಿಕ್ತರಾದರು. ಅಹ್ಸನಾಬಾದ್ (ಕಲಬುರಗಿ) ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡರು. ಅವರು ತಮ್ಮ ರಾಜ್ಯದ ಗಡಿ ಪ್ರದೇಶವನ್ನು ಡೆಕನ್‌ನಾದ್ಯಂತ ವಿಸ್ತರಿಸಿದರು. 1527ರಲ್ಲಿ ಅದರ ಎರಡನೇ ರಾಜಧಾನಿ ಬೀದರ್‌ನಲ್ಲಿ ನಿರ್ಮಿಸಿದರು’ ಎಂದರು.

ADVERTISEMENT

ಬಹಮನಿ ಫೌಂಡೇಷನ್ ಅಧ್ಯಕ್ಷ ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕಿ ಮಾತನಾಡಿದರು. ಕಲಾವಿದ ಮೊಹಮ್ಮದ್ ಅಯಾಜೊದ್ದೀನ್ ಪಟೇಲ್ ಬಹಮನಿ ಸುಲ್ತಾನರ ಇತಿಹಾಸದ ಮೇಲೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲಿದರು.

ಕಲಾವಿದ ರೆಹಮಾನ್ ಪಟೇಲ ಮಾತನಾಡಿ, ‘ಎರಡು ಶತಮಾನಗಳಷ್ಟು ಆಳ್ವಿಕೆ ನಡೆಸಿದ ಬಹಮನಿಗಳು, ಅದ್ಭುತವಾದ ಕಲೆ ಮತ್ತು ವಾಸ್ತುಶಿಲ್ಪವನ್ನು ಕೊಡುಗೆ ನೀಡಿದ್ದಾರೆ. ಅದನ್ನು ಇಂಡೊ-ಇಸ್ಲಾಮಿಕ್ ಶೈಲಿ ಎಂದು ಗುರುತಿಸಲಾಗುತ್ತದೆ’ ಎಂದರು.

ಸದರ್ ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ಜಬ್ಬಾರ್ ಗೋಳ, ಅಜೀಜುಲ್ಲಾ ಸರ್ಮಸ್ತ್, ಮಹಮ್ಮದ್ ಮೆರಾಜುದ್ದೀನ್, ನವಾಬ್ ಖಾನ್, ಅಲಾವುದ್ದೀನ್ ಅಕ್ಬರ್, ಅನ್ವರ್ ಸಿಲಾದಾರ್‌, ಅಸದ್ ಅನ್ಸಾರಿ, ಮಹಮ್ಮದ್ ಅಯಾಜುದ್ದೀನ್ ಪಟೇಲ್, ಮಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ಫಕ್ರುದ್ದೀನ್, ಯಾಸೀನ್ ಅಶ್ರಫ್, ಮೊಹಮ್ಮದ್ ಶಫೀಕ್, ಸಾಜಿದ್ ರಂಜೋಲ್ವಿ, ಅಬ್ದುಲ್ಲಾ ಖಾನ್, ಬಸವರಾಜ ರಾವೂರ್ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.