ADVERTISEMENT

ಬಸವಣ್ಣನವರಿಗೆ ಸಮ ಸಮಾಜದ ಶ್ರೇಯಸ್ಸು: ಈಶ್ವರ ಖಂಡ್ರೆ

ಬಸವೇಶ್ವರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:13 IST
Last Updated 29 ಮೇ 2022, 4:13 IST
ಚಿಂಚೋಳಿಯಲ್ಲಿ ನಡೆದ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವವನ್ನು ಶಾಸಕ ಡಾ. ಅವಿನಾಶ ಜಾಧವ ಉದ್ಘಾಟಿಸಿದರು. ಡಾ. ಚನ್ನವೀರ ಶಿವಾಚಾರ್ಯರು, ಉಮೇಶ ಜಾಧವ, ರಾಜಕುಮಾರ ಪಾಟೀಲ ತೆಲ್ಕೂರು, ಡಾ. ಶರಣಪ್ರಕಾಶ ಪಾಟೀಲ ಇದ್ದರು
ಚಿಂಚೋಳಿಯಲ್ಲಿ ನಡೆದ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವವನ್ನು ಶಾಸಕ ಡಾ. ಅವಿನಾಶ ಜಾಧವ ಉದ್ಘಾಟಿಸಿದರು. ಡಾ. ಚನ್ನವೀರ ಶಿವಾಚಾರ್ಯರು, ಉಮೇಶ ಜಾಧವ, ರಾಜಕುಮಾರ ಪಾಟೀಲ ತೆಲ್ಕೂರು, ಡಾ. ಶರಣಪ್ರಕಾಶ ಪಾಟೀಲ ಇದ್ದರು   

ಚಿಂಚೋಳಿ: ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಹಾಗೂ ಮೌಢ್ಯತೆ ತೊಡೆದು ಹಾಕಿ, ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮ ಸಮಾಜ ನಿರ್ಮಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ತಿಳಿಸಿದರು.

ತಾಲ್ಲೂಕು ಬಸವ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡ ಜಯಂತಿಯಲ್ಲಿ ಮಾತನಾಡಿ, ಶರಣರ ಚಳವಳಿಯ ಮೂಲ ಉದ್ದೇಶವೇ ಸಾಮಾಜಿಕ ನ್ಯಾಯವಾಗಿತ್ತು. ಸ್ತ್ರೀ ಸಮಾನತೆ, ಜಾತೀಯತೆ ಹಾಗೂ ಅಂಧಶ್ರದ್ಧೆ ಕಿತ್ತೊಗೆಯುವುದಾಅಗಿತ್ತು ಎಂದರು.

ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ, ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸು ಬಯಸಿದ ಮಹಾ ಮಾನವತಾದಿ. ನಾವು ಬಸವಣ್ಣನವರ ಜೀವನಾದರ್ಶ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಮಿತಿ ಗೌರವಾಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಮೆರವಣಿಗೆ ಉದ್ಘಾಟಿಸಿದರೆ, ಸಮಿತಿ ಅಧ್ಯಕ್ಷ ಗೌತಮ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು, ಐನೋಳ್ಳಿಯ ಹಿರಿಯ ಸಾಹಿತಿ ಪಂಚಾ ಕ್ಷರಿ ಪುಣ್ಯಶೆಟ್ಟಿ ಬರೆದ ‘ಮಹಾತಪಸ್ವಿ ಬಕ್ಕಪ್ರಭು’ ಕೃತಿ ಲೋಕಾರ್ಪಣೆ ಮಾಡಿ ದರು. ನರನಾಳದ ಶಿವಕುಮಾರ ಶಿವಾ ಚಾರ್ಯರು ಆಶೀರ್ವಚನ ನೀಡಿದರು.

ಮಲ್ಲಿಕಾರ್ಜುನ ದೇವರು, ಚಿಮ್ಮಾಈದಲಾಯಿಯ ವಿಜಯಮಹಾಂತೇಶ್ವರ ಶಿವಾಚಾರ್ಯರು, ನಿಡಗುಂದಾದ ಕರುಣೇಶ್ವರ ಶಿವಾಚಾರ್ಯರು, ಗೌಡನ ಹಳ್ಳಿಯ ಮಲ್ಲಿಕಾರ್ಜುನ ದೇವರು, ಐನಾಪುರದ ಪಂಚಾಕ್ಷರಿ ದೇವರು, ಪಂಪಾಪತಿ ದೇವರು, ಸಿದ್ರಾಮಯ್ಯ ಸ್ವಾಮೀಜಿ ಸಮ್ಮುಖವಹಿಸಿದ್ದರು.

ಡಾ. ವಿಕ್ರಮ ಪಾಟೀಲ, ಬಾಲರಾಜ ಗುತ್ತೇದಾರ, ಬಾಬುರಾವ್ ಪಾಟೀಲ, ಜಗದೇವಿ ಗಡಂತಿ, ಸಯ್ಯದ್ ಶಬ್ಬೀರ್, ಶರಣು ಪಪ್ಪಾ, ಚಿತ್ರಶೇಖರ ಪಾಟೀಲ, ಶರಣು ಮೋದಿ, ಬಸವರಾಜ ಮಾಲಿ, ಸಂತೋಷ ಗಡಂತಿ, ಡಾ.ವಿಜಯಕುಮಾರ ಪರೂತೆ ಹಾಗೂ ಜಯಂತ್ಯುತ್ಸವ ಸಮಿತಿ ಪದಾಧಿಕಾರಿಗಳು ಮತ್ತು ವಿವಿಧ ಸಮಾಜಗಳ ಅಧ್ಯಕ್ಷರು ಇದ್ದರು.

ಶಿವಕುಮಾರ ಪಂಚಾಳ ನೇತೃತ್ವದಲ್ಲಿ ಪ್ರಾರ್ಥನೆ ಹಾಗೂ ಸಂಗೀತ ಸುಧೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.