ADVERTISEMENT

ಬಸವ ತತ್ವ ಪ್ರಚಾರಕ ಶ್ರೀಶೈಲಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:46 IST
Last Updated 20 ಜುಲೈ 2019, 14:46 IST
ಡಾ.ಶ್ರೀಶೈಲ ಹಾದಿಮನಿ ದಂಪತಿಯನ್ನು ಬಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಡಾ.ವಿಲಾಸವತಿ ಖೂಬಾ, ಡಾ.ಜಯಶ್ರೀ ದಂಡೆ, ಡಾ.ವೀರಣ್ಣ ದಂಡೆ ಇದ್ದಾರೆ
ಡಾ.ಶ್ರೀಶೈಲ ಹಾದಿಮನಿ ದಂಪತಿಯನ್ನು ಬಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಡಾ.ವಿಲಾಸವತಿ ಖೂಬಾ, ಡಾ.ಜಯಶ್ರೀ ದಂಡೆ, ಡಾ.ವೀರಣ್ಣ ದಂಡೆ ಇದ್ದಾರೆ   

ಕಲಬುರ್ಗಿ: ಅಮೆರಿಕದಲ್ಲಿ ಬಸವ ತತ್ವಗಳ ಪ್ರಚಾರದಲ್ಲಿ ತೊಡಗಿರುವ ಕಲಬುರ್ಗಿಯವರಾದ ಡಾ.ಶ್ರೀಶೈಲ ಹಾದಿಮನಿ ದಂಪತಿಯನ್ನು ಇಲ್ಲಿನ ಬಸವ ಸಮಿತಿ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.

‘ಡಾ. ಶ್ರೀಶೈಲ ಹಾದಿಮನಿ ಯುವ ವಿಜ್ಞಾನಿ. ಈಗವರು ಅಮೆರಿಕೆ ಹಾಗೂ ಕೆನಡಾ ದೇಶಗಳಲ್ಲಿರುವ ವೀರಶೈವ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಶರಣರ ಬದುಕಿನ ಮಾನವೀಯ ಮೌಲ್ಯಗಳನ್ನು ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಅವರಲ್ಲಿ ವಿಜ್ಞಾನ ಮತ್ತು ತತ್ತ್ವಜ್ಞಾನಗಳೆರಡೂ ಸಮನಾಗಿ ತುಂಬಿಕೊಂಡಿವೆ’ ಎಂದು ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಬಣ್ಣಿಸಿದರು.

‘ಹಾದಿಮನಿ ಅವರು ರಸಾಯನವಿಜ್ಞಾನದಲ್ಲಿ ಬಾಂಬೆ ಐಐಟಿಯಿಂದ ಪಿಎಚ್.ಡಿ. ಪಡೆದು, ಔಷಧ ತಯಾರಿಕಾ ಕಂಪನಿಯೊಂದರಲ್ಲಿ ದುಡಿಯಲು 25 ವರ್ಷಗಳ ಹಿಂದೆ ಅಮೆರಿಕಾಕ್ಕೆ ಹೋದರು. ಯುವ ವಿಜ್ಞಾನಿಯಾಗಿ ನಿಷ್ಠೆಯಿಂದ ಸಂಶೋಧನೆಯಲ್ಲಿ ತೊಡಗಿದರು. ಅವರ 50 ಮಹತ್ವದ ಸಂಶೋಧನೆಗಳಿಗೆ ಅಮೆರಿಕ ದೇಶದ ಪೇಟೆಂಟ್ ದೊರಕಿದೆ. 35 ಸಂಶೋಧನೆಗಳಿಗೆ ಯುಎನ್‍ಐಯಿಂದ ಪೇಟೆಂಟ್ ಸಿಕ್ಕಿದೆ.ತಮ್ಮ ಬಿಡುವಿನ ವೇಳೆಯಲ್ಲಿ ಅಮೆರಿಕ, ಇಂಗ್ಲೆಂಡ್‌, ಪೋಲಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಪೂರ, ಅರೇಬಿಯಾ ದೇಶಗಳಿಗೆ ಭೇಟಿಯಿತ್ತು, ಅಲ್ಲಿಯ ಕನ್ನಡಿಗರಿಗೆ ಶರಣ ತತ್ವದ ಉಪನ್ಯಾಸ ಕೊಡುತ್ತಾರೆ. ಲಿಂಗಪೂಜೆಯ ವಿಧಾನ ಹೇಳಿಕೊಡುತ್ತಿದ್ದಾರೆ.ಈ ಎಲ್ಲ ದೇಶಗಳಲ್ಲಿರುವ ಬಸವ ಸಂಘಟನೆಗಳನ್ನು ‘ಬಸವ ಫೌಂಡೇಶನ’ ಎನ್ನುವ ಒಂದೇ ಸೂರಿನಡಿ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಬಸವ ಸಮಿತಿಯ ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.