ADVERTISEMENT

ಬಸವರಾಜ ಕೊನೇಕ ಪುಸ್ತಕ ಸಂಸ್ಕೃತಿಯ ಭೀಷ್ಮ: ಗವಿಸಿದ್ಧಪ್ಪ ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:02 IST
Last Updated 30 ಜನವರಿ 2026, 6:02 IST
ಪ್ರಥಮ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷ ಬಸವರಾಜ ಜಿ.ಕೊನೇಕ ಅವರಿಗೆ ಕಲಬುರಗಿಯಲ್ಲಿ ಅಧಿಕೃತ ಆಹ್ವಾನ ಪತ್ರ ನೀಡಿ, ಸನ್ಮಾನಿಸಲಾಯಿತು
ಪ್ರಥಮ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷ ಬಸವರಾಜ ಜಿ.ಕೊನೇಕ ಅವರಿಗೆ ಕಲಬುರಗಿಯಲ್ಲಿ ಅಧಿಕೃತ ಆಹ್ವಾನ ಪತ್ರ ನೀಡಿ, ಸನ್ಮಾನಿಸಲಾಯಿತು   

ಕಲಬುರಗಿ: ‘ಪುಸ್ತಕೋದ್ಯಮಿ ಬಸವರಾಜ ಕೊನೇಕ ಅವರು ಪ್ರತಿಭಾನ್ವಿತ ಯುವ, ಹಿರಿಯ, ಸಮಕಾಲೀನ ಲೇಖಕ, ಲೇಖಕಿಯರನ್ನು ಜಾತ್ಯತೀತವಾಗಿ ಗುರುತಿಸಿ 3,700 ವಿವಿಧ ಪ್ರಕಾರದ ಪುಸ್ತಕಗಳನ್ನು ಪ್ರಕಟಿಸಿದ್ದು ಸಾಮಾನ್ಯ ಸಂಗತಿಯಲ್ಲ. ಅವರೊಬ್ಬ ಪುಸ್ತಕ ಸಂಸ್ಕೃತಿಯ ಭೀಷ್ಮ’ ಎಂದು ಹಿರಿಯ ಸಾಹಿತಿ ಮತ್ತು ಸಮ್ಮೇಳನ ಸಂಯೋಜಕ ಗವಿಸಿದ್ಧಪ್ಪ ಪಾಟೀಲ ಅಭಿಪ್ರಾಯಪಟ್ಟರು.

ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ನಡೆಯಲಿರುವ ಪ್ರಥಮ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷರಾದ ಬಸವರಾಜ ಜಿ.ಕೊನೇಕ ಅವರಿಗೆ ನಗರದ ಸಿದ್ಧಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನ ಸಂಸ್ಥೆಯಲ್ಲಿ ಅಧಿಕೃತ ಆಹ್ವಾನ ಪತ್ರ ನೀಡಿ, ಮಾತನಾಡಿದರು.

ಕೊಪ್ಪಳ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ, ‘ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಬಸವರಾಜ ಜಿ.ಕೊನೇಕ ಅವರಿಂದ ಸಾವಿರಾರು ಲೇಖಕರು ಹೊರಹೊಮ್ಮಿದ್ದಾರೆ’ ಎಂದರು.

ADVERTISEMENT

ಸಾಹಿತಿ, ಪತ್ರಕರ್ತ ಮಾಣಿಕ ಆರ್‌.ಭುರೆ, ‘ಬಸವರಾಜ ಕೊನೇಕ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ’ ಎಂದು ಬಣ್ಣಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಜಯದೇವಿ ಗಾಯಕವಾಡ, ‘ಕೊನೇಕ ಅವರಿಗೆ ಸರ್ಕಾರದ ಉನ್ನತ ಪ್ರಶಸ್ತಿಗಳು ಲಭಿಸಲಿ’ ಎಂದು ಆಶಿಸಿದರು.

ಆಹ್ವಾನ ಸ್ವೀಕರಿಸಿದ ಬಸವರಾಜ ಕೊನೇಕ ಅವರು, ‘ನನ್ನ ಸೇವೆ ಗುರುತಿಸಿದ ಉರಿಲಿಂಗಪೆದ್ದಿ ಮಠಕ್ಕೆ ನಾನು ಚಿರಋಣಿ. ಇದು ಸಿದ್ಧಲಿಂಗೇಶ್ವರ ಮತ್ತು ಶರಣಬಸವರ ಆಶೀರ್ವಾದ ಮತ್ತು ಕರ್ನಾಟಕದ ಸಮಸ್ತ ಪ್ರಕಾಶಕರಿಗೆ ಸಂದ ಗೌರವ ಎಂದು ಭಾವಿಸಿದ್ದೇನೆ’ ಎಂದರು.

ಸಿದ್ಧಲಿಂಗ ಕೊನೇಕ, ಜಯದ್ರತ, ಸರೋಜಾ, ಸಾಕ್ಷಿ‌ ಜಿ., ರಾಜಕುಮಾರ ಮಾಳಗೆ, ಸಿದ್ದಪ್ಪ ಹೊಸಮನಿ, ಡಾಕಪ್ಪ ಎಂ.ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.