ADVERTISEMENT

ಬೆಳಕೋಟಾ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 3:52 IST
Last Updated 18 ಸೆಪ್ಟೆಂಬರ್ 2020, 3:52 IST
ಕಮಲಾಪುರ ತಾಲ್ಲೂಕಿನ ಬೆಳಕೋಟಾ (ಗಂಡೋರಿ ನಾಲಾ) ಜಲಾಶಯದಿಂದ ನೀರು ಹೊರ ಬಿಟ್ಟಿರುವುದು
ಕಮಲಾಪುರ ತಾಲ್ಲೂಕಿನ ಬೆಳಕೋಟಾ (ಗಂಡೋರಿ ನಾಲಾ) ಜಲಾಶಯದಿಂದ ನೀರು ಹೊರ ಬಿಟ್ಟಿರುವುದು   

ಕಮಲಾಪುರ: ತಾಲ್ಲೂಕಿನ ಬೆಳಕೋಟಾ (ಗಂಡೋರಿ ನಾಲಾ) ಜಲಾಶಯದ ಜಲಾನಯನ ಪ್ರದೇಶದಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು ನೀರಿನ ಸಂಗ್ರಹ ಗರಿಷ್ಠ ಮಟ್ಟ 1467.50 ಅಡಿ ತಲುಪಿದೆ.

ಬೆಳಿಗ್ಗೆ 28 ಸಾವಿರ ಕ್ಯುಸೆಕ್ ಒಳ ಹರಿವು ಇತ್ತು. ಹೀಗಾಗಿ 18,700 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಮಧ್ಯಾಹ್ನದ ಹೊತ್ತಿಗೆ 10 ಸಾವಿರ ಕ್ಯುಸೆಕ್ ಒಳಹರಿವು ಇತ್ತು. ನಂತರ 14,500 ಕ್ಯುಸೆಕ್ ನೀರು ಹೊರಬಿಡಲಾಗಿದೆ. ಒಳ ಹರಿವು ತಗ್ಗಿದಂತೆ ಹೊರ ಹರಿವನ್ನು ಸಹ ಕಡಿಮೆ ಮಾಡಲಾಗುವುದು ಎಂದು ಜಲಾಶಯದ ಕಿರಿಯ ಎಂಜಿನಿಯರ್‌ ಶ್ರೀಕಾಂತ ಹೊಂಡಾಳೆ ತಿಳಿಸಿದರು.

ಜಲಾಶಯದ ಹೊರ ಹರಿವಿನಿಂದ ಮಹಾಗಾಂವ ಸೇತುವೆ ಮೇಲೆ ಪ್ರವಾಹ ಉಂಟಾಗಿತ್ತು. ಸೇತುವೆ ಮೇಲೆ ಸುಮಾರು 2 ಅಡಿ ನೀರು ಹರಿದುದರಿಂದ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.