ADVERTISEMENT

‘ಶಿಕ್ಷಕರು ತಂತ್ರಜ್ಞಾನ ಯುಗ ಅನುಸರಿಸಿ’

ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 6:47 IST
Last Updated 20 ಸೆಪ್ಟೆಂಬರ್ 2021, 6:47 IST
ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಯ್ಯ ಗುತ್ತೇದಾರ, ಡಾ.ಚಿ.ಸಿ. ನಿಂಗಣ್ಣ, ಬಿ.ಎಚ್‌. ನಿರಗುಡಿ, ಪ್ರೊ.ಚಂದ್ರಕಾಂತ ಯಾತನೂರ, ಶರಣಬಸಪ್ಪ ವಡ್ಡಿನಕೇರಿ ಇದ್ದರು
ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಯ್ಯ ಗುತ್ತೇದಾರ, ಡಾ.ಚಿ.ಸಿ. ನಿಂಗಣ್ಣ, ಬಿ.ಎಚ್‌. ನಿರಗುಡಿ, ಪ್ರೊ.ಚಂದ್ರಕಾಂತ ಯಾತನೂರ, ಶರಣಬಸಪ್ಪ ವಡ್ಡಿನಕೇರಿ ಇದ್ದರು   

ಕಲಬುರ್ಗಿ: ‘ಶಿಕ್ಷಕರು ರಾಷ್ಟ್ರದ ರಕ್ಷಕರು. ಬದಲಾಗುತ್ತಿರುವ ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡು ಮಕ್ಕಳ ಉಜ್ವಲ ಜೀವನ ರೂಪಿಸಿ ಈ ದೇಶದ ಸರ್ವಶ್ರೇಷ್ಠ ನಾಗರಿಕರಾಗಿ ರೂಪಿಸಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಂದ್ರಕಾಂತ ಯಾತನೂರ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಭಾನುವಾರ 25 ಜನರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

‘ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ನಿರಂತರ ಅಧ್ಯಯನ ಹಾಗೂ ದೂರದೃಷ್ಟಿಯನ್ನು ರೂಢಿಸಿ ಕೊಂಡು ಭೋದನಾ ಕಾರ್ಯದಲ್ಲಿ ನಿರತರಾಗಬೇಕು’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಸೋಮಶೇಖರ ಟೆಂಗಳಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಟ್ಟಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿ, ‘ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡುವುದರ ಮೂಲಕ ಶಿಕ್ಷಕರ ಜವಾಬ್ದಾರಿ ಹೆಚ್ಚಿಸಿದಂತಾಗಿದೆ. ಹೀಗೆ ಉತ್ತಮ ಶಿಕ್ಷಕರ ಸಾಧನೆಗಳನ್ನು ಗುರುತಿಸಿ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ' ಎಂದರು.

ಡಾ.ರಾಜೇಂದ್ರ ಯರನಾಳೆ ಅಧ್ಯಕ್ಷತೆ ವಹಿಸಿದ್ದರು. ಡಾ.ಚಿ.ಸಿ ನಿಂಗಣ್ಣ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಮಾತನಾಡಿದರು.

ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪದವಿ ಪೂರ್ವ ವಿಭಾಗದ ಬಿ.ಸಿ. ಚವಾಣ್, ಚಂದ್ರಶೇಖರ್ ಪಟ್ಟಣಕರ್, ವಿಜಯಕುಮಾರ ರೋಣದ ಪ್ರೌಢ ಶಾಲಾ ವಿಭಾಗದ ಜಗದೀಶ್ವರ ತದಲಾಪೂರ ಚಿಂಚೋಳಿ, ಅಲ್ಲಾ ಪಟೇಲ್ ಆರ್. ಯಡ್ರಾಮಿ, ಆಳಂದ ಧರ್ಮಣ್ಣ ಧನ್ನಿ, ಕಾಶಿಬಾಯಿ ಹರಕಂಚಿ ಕಮಲಾಪೂರ, ಬಸವರಾಜ ಪಾಟೀಲ ಭೀಮಳ್ಳಿ, ಮಲ್ಲಿಕಾರ್ಜುನ ಜಮಾದಾರ ಕಮಲಾಪೂರ, ಸುರೇಖಾ ಜಾಧವ ಕಲಬುರ್ಗಿ, ಸಂತೋಷ ಹಿರೇಮಠ ಜೇವರ್ಗಿ, ಬಾಬು ಜಾಧವ ಕಲಬುರ್ಗಿ, ಮಲ್ಲಮ್ಮ ಕಾಳಗಿ, ಅಮೃತಾ ಕೊರಳ್ಳಿ ಕಲಬುರ್ಗಿ.

ಪ್ರಾಥಮಿಕ ಶಾಲಾ ವಿಭಾಗದ ವಿಜಯಕುಮಾರ ಪೋಮಾಜಿ ಆಳಂದ, ಮಂಗಲಾ ಕಪರೆ ಕಲಬುರ್ಗಿ, ಮಾಲತೇಶ ಬಬ್ಬಜ್ಜಿ ಚಿತ್ತಾಪುರ, ರೋಹಿಣಿ ಧನಶೆಟ್ಟಿ ಪಾಳಾ, ಮಲ್ಲಿಕಾರ್ಜುನ ಸಿರಸಗಿ ಕಮಲಾಪೂರ, ಜಗದೇವಪ್ಪ ಹತ್ತರಕಿ ಅಫಜಲಪುರ, ನಿಂಗಣ್ಣ ಕಿರಣಗಿ ಕಲಬುರ್ಗಿ, ಮಂಗಲಬಾಯಿ ಕಾಳಗಿ, ಮುರಳಿಧರ ಟೋಣಪೆ ಕಲಬುರ್ಗಿ, ದೇವೇಂದ್ರಪ್ಪ ಯಾದವ ಸೇಡಂ, ಮಹ್ಮದ್ ಶರಪೊದ್ದೀನ್ ಶಹಾಬಾದ ಅವರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜಶೇಖರ ಮಾಂಗ ಪ್ರಾರ್ಥನೆ ಮಾಡಿದರು. ಡಾ ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ಶರಣಗೌಡ ಪಾಟೀಲ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪಿ.ಎಂ. ಮಣ್ಣೂರ, ಡಾ.ಸಂಗಮೇಶ ಹಿರೇಮಠ, ಪ್ರೊ.ಬಿ.ಎಸ್. ಮಾಲಿಪಾಟೀಲ, ಚಾಮರಾಜ ದೊಡ್ಡಮನಿ, ಅಂಬಾರಾಯ ಕೋಣೆ, ಮಹೇಶ ಹೂಗಾರ, ಸಿದ್ದಣ್ಣ ಪೂಜಾರಿ, ಡಾ.ನಾಗಪ್ಪ ಗೋಗಿ, ಅಮರೇಶ ಹಾಲವಿ, ಪಿ.ಬಿ. ಹೊಸಮನಿ, ಜಿ.ಜಿ. ವಣಿಕ್ಯಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.