
ನಾಗಯ್ಯ ಹಿರೇಮಠ
ಚಿತ್ತಾಪುರ (ಕಲಬುರಗಿ ಜಿಲ್ಲೆ): ‘ಪಟ್ಟಣದಲ್ಲಿ ಇಂದು (ಡಿಸೆಂಬರ್ 1) ಆಯೋಜಿಸಿರುವ ‘ಭೀಮ ನಡಿಗೆ’ ಪಥ ಸಂಚಲನದಲ್ಲಿ ಚಿತ್ತಾಪುರ ತಾಲ್ಲೂಕಿನವರು ಮಾತ್ರ ಭಾಗವಹಿಸಬೇಕು’ ಎಂಬ ಷರತ್ತು ವಿಧಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನ. 30ರಂದು ಅನುಮತಿ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳು, ಬೀದಿಗಳಲ್ಲಿ ಭಾಷಣ, ಕಾರ್ಯಕ್ರಮ ಆಯೋಜಿಸಬಾರದು. ರಾಜಕೀಯ ಭಾಷಣ ಮಾಡಬಾರದು, ಪ್ರಚೋದನಕಾರಿ ಭಾಷೆ, ಘೋಷಣೆ ಬಳಸಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ತಹಶೀಲ್ದಾರ್ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ದಿನವೇ ತಮಗೂ ಭೀಮನಡಿಗೆ ನಡೆಸಲು ಅನುಮತಿ ನೀಡುವಂತೆ ಕೋರಿ ವಿವಿಧ ದಲಿತ ಸಂಘಟನೆಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದವು. ಆದರೆ, ಭೀಮ ನಡಿಗೆಗೆ ಬೇರೆ ದಿನ ಅವಕಾಶ ನೀಡಲು ಹೈಕೋರ್ಟ್ ಸೂಚಿಸಿತ್ತು. ಆರ್‌ಎಸ್‌ಎಸ್ ಪಥಸಂಚಲನ ನ.16ರಂದು ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.