ADVERTISEMENT

ಬೈಕುಗಳ ಡಿಕ್ಕಿ; ಇಬ್ಬರ ಸಾವು, ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:55 IST
Last Updated 23 ನವೆಂಬರ್ 2020, 4:55 IST
 ರವಿ
 ರವಿ   

ವಾಡಿ: ತಾಲ್ಲೂಕಿನಸನ್ನತಿ ಸಮೀಪದ ಕನಗನಹಳ್ಳಿ ಬಳಿ ಭಾನುವಾರ ಸಂಜೆ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಲಕಿ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ

ಇಂಗಳಗಿಯ ರವಿ ಕಲಬುರ್ಗಿ (35) ಹಾಗೂ ಕೊಲ್ಲೂರು ನಿವಾಸಿ ಶಂಕರಗೌಡ ಹಾದಿಮನಿ (26) ಮೃತಪಟ್ಟಿದ್ದಾರೆ. ರವಿ ಅವರು ಇಂಗಳಗಿಯಿಂದ ತಮ್ಮ ಪತ್ನಿ ಮತ್ತು ಮಗಳ ಸಮೇತ ಬೈಕ್‌ನಲ್ಲಿ ಇಬ್ರಾಹಿಂಪುರ ಗ್ರಾಮಕ್ಕೆ ತೆರಳುತ್ತಿದ್ದರು. ಇದೇ ವೇಳೆ ಎದುರಿಗೆ ಬರುತ್ತಿದ್ದ ಶಂಕರಗೌಡ ಅವರ ಬೈಕ್‌ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಮೃತ ರವಿ ಅವರ ಪತ್ನಿ ಶಿವಲೀಲಾ ಹಾಗೂ ಮಗಳು ವೈಷ್ಣವಿಗೆ ಗಂಭೀರ ಗಾಯಗಳಾಗಿದ್ದು, ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪಿಎಸ್ಐ ವಿಜಯಕುಮಾರ ಭಾವಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.