ADVERTISEMENT

ಕಲಬುರಗಿ: ರಿಂಗ್ ರಸ್ತೆಯಲ್ಲಿ ಡಿಕ್ಕಿ: ಬೈಕ್ ಸವಾರನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 6:03 IST
Last Updated 31 ಡಿಸೆಂಬರ್ 2021, 6:03 IST
ಡಿಕ್ಕಿಯಲ್ಲಿ ನಜ್ಜುಗುಜ್ಜಾಗಿರುವ ಬೈಕ್
ಡಿಕ್ಕಿಯಲ್ಲಿ ನಜ್ಜುಗುಜ್ಜಾಗಿರುವ ಬೈಕ್   

ಕಲಬುರಗಿ: ನಗರದ ನಾಗನಹಳ್ಳಿ ಕ್ರಾಸ್‌ನಿಂದ ರಾಮಮಂದಿರ ವೃತ್ತಕ್ಕೆ ಬರುವ ರಿಂಗ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಬಸ್, ಕಾರು ಹಾಗೂ ಬೈಕ್‌ ಮಧ್ಯದ ಡಿಕ್ಕಿಯಲ್ಲಿ ಬೈಕ್ ಸವಾರ ಅನುರೂಪ್ ನಿಂಬರ್ಗಾ (22) ಎಂಬುವವರ ಕಾಲಿನ ಮೂಳೆಗೆ ಗಾಯವಾಗಿದೆ.

ಎದುರಿನಿಂದ ಬಂದ ಕಾರನ್ನು ತಪ್ಪಿಸಲು ಮತ್ತೊಂದು ಕಾರು ಬ್ರೇಕ್ ಹಾಕಿದಾಗ ಅದರ ಹಿಂದಿದ್ದ ಬೈಕ್ ಸವಾರನಿಗೆ ಹಿಂದಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆಯಿತು. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮುಂದಕ್ಕೆ ಸರಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT