ADVERTISEMENT

ಆಳಂದ: ಬೈಕ್ ಸವಾರ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:52 IST
Last Updated 20 ಸೆಪ್ಟೆಂಬರ್ 2020, 14:52 IST

ಆಳಂದ (ಕಲಬುರ್ಗಿ): ತುಂಬಿ ಹರಿಯುತ್ತಿದ್ದ ಹಳ್ಳವನ್ನು ಬೈಕ್‌ನಲ್ಲಿ ದಾಟಲು ಯತ್ನಿಸಿದ ತಾಲ್ಲೂಕಿನ ಶ್ರೀಚಂದ ಗ್ರಾಮದ ಬೀರಶೆಟ್ಟಿ ಹಣಮಂತ ಬೋಧನವಾಡಿ (28) ಎಂಬ ಯುವಕ ನೀರಿನ ರಭಸಕ್ಕೆ ಭಾನುವಾರ ಸಂಜೆ ಕೊಚ್ಚಿಕೊಂಡು ಹೋಗಿದ್ದಾರೆ.

ಶ್ರೀಚಂದ ಗ್ರಾಮದ ಬೀರಶೆಟ್ಟಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಯತ್ತ ಬರುತ್ತಿದ್ದರು. ಹಳ್ಳದಲ್ಲಿ ರಭಸದಿಂದ ನೀರು ಹರಿಯುತ್ತಿದ್ದರೂ ದಾಟಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ ಸ್ಕಿಡ್ ಆಗಿ ಬಿದ್ದಿದೆ. ಅದನ್ನು ಎತ್ತಿಕೊಂಡು ಚಾಲನೆ ಮಾಡಲು ಸುಮಾರು ಹೊತ್ತು ಯತ್ನಿಸಿದ್ದಾರೆ. ಆದರೆ, ವಾಹನದ ಎಂಜಿನ್ ಚಾಲೂ ಆಗಿಲ್ಲ. ತಕ್ಷಣ ಗ್ರಾಮಸ್ಥರು ಹಳ್ಳದ ಬಳಿ ಧಾವಿಸಿ ಬೀರಶೆಟ್ಟಿ ಅವರತ್ತ ಹಗ್ಗವನ್ನು ಎಸೆದಿದ್ದಾರೆ. ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ನೀರಿನ ಸೆಳೆತ ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ಪತ್ತೆ ಹಚ್ಚಲು ನಿಂಬರ್ಗಾ ಠಾಣೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ನೀರು ರಭಸದಿಂದ ಹರಿಯುತ್ತಿದ್ದುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಇತ್ತೀಚೆಗೆ ಆಳಂದ ತಾಲ್ಲೂಕಿನ ವೈಜಾಪುರ–ಬೊಮ್ಮನಹಳ್ಳಿ ಮಧ್ಯದ ಹಳ್ಳದಲ್ಲಿ ಕಾರು ದಾಟಿಸಲು ಯತ್ನಿಸಿದ ಅಫಜಲಪುರದ ಜೆಸ್ಕಾಂ ಸಹಾಯಕ ಎಂಜಿನಿಯರ್ ಸಿದ್ದರಾಮ ಅವಟೆ ಅವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಸಾವಿಗೀಡಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.