ADVERTISEMENT

ನಿಂಬರ್ಗಾ: ಮೂವರು ಬೈಕ್‌ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 6:28 IST
Last Updated 11 ಅಕ್ಟೋಬರ್ 2020, 6:28 IST
ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸರು ಮೂವರು ಬೈಕ್‌ ಕಳ್ಳರನ್ನು ಬಂಧಿಸಿದ್ದಾರೆ. ಪಿಎಸ್ಐ ಸುರೇಶ, ಸಿಬ್ಬಂದಿ ಶಂಕರ, ಸಿದ್ದರಾಮ, ರಮೇಶ, ಸಿದ್ದಣ್ಣ ಇದ್ದಾರೆ.
ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸರು ಮೂವರು ಬೈಕ್‌ ಕಳ್ಳರನ್ನು ಬಂಧಿಸಿದ್ದಾರೆ. ಪಿಎಸ್ಐ ಸುರೇಶ, ಸಿಬ್ಬಂದಿ ಶಂಕರ, ಸಿದ್ದರಾಮ, ರಮೇಶ, ಸಿದ್ದಣ್ಣ ಇದ್ದಾರೆ.   

ಆಳಂದ: ತಾಲ್ಲೂಕಿನ ನಿಂಬರ್ಗಾ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುತ್ತಿದ್ದ ಮೂವರನ್ನು ಶುಕ್ರವಾರ ಪೊಲೀಸರು ಬಂಧಿಸಿ ಅವರಿಂದ 11 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಸೋಮಲಿಂಗ ಕೊಂಬಿನ್, ಶಿವಾನಂದ ಜಿಡಗಾ, ದಿಲೀಪ ದೊಡ್ಡಮನಿ ಬಂಧಿತರು. ನಿಂಬರ್ಗಾ, ಗಾಣಗಾಪುರ, ಆಳಂದ, ಕಲಬುರ್ಗಿ ಮತ್ತಿತರ ಸ್ಥಳಗಳಲ್ಲಿ ಬೈಕ್‌ ಕಳವು ಮಾಡಿ ಪರಾರಿಯಾಗುತ್ತಿದ್ದ ಇವರು ಬೇರೆ ವ್ಯಕ್ತಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು.

ಬೈಕ್‌ ಕಳೆದುಕೊಂಡವರು ಸೂಕ್ತ ದಾಖಲೆ ಒದುಗಿಸಿ ತಮ್ಮ ಬೈಕ್‌ ತೆಗೆದುಕೊಂಡು ಹೋಗಬಹುದು ಎಂದು ನಿಂಬರ್ಗಾ ಠಾಣೆ ಪಿಎಸ್ಐ ಸುರೇಶ ಚವ್ಹಾಣ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.