ಕಲಬುರ್ಗಿ: ಇಲ್ಲಿನ ದುಬೈ ಕಾಲೊನಿಯಲ್ಲಿ ಮಂಗಳವಾರ ಬಾವಿಯಲ್ಲಿ ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದ ಬಾಲಕನ ಶವ ಬುಧವಾರ ದೊರೆತಿದೆ.
ಕಾಲೊನಿ ಸಮೀಪದ ಲಂಗೋಟಿ ಪೀರ್ ದರ್ಗಾ ಸಮೀಪದ ಶುಭಂ ರಾಜು ಗೌಳಿ (12) ಸಾವಿಗೀಡಾದ ಬಾಲಕ. ಮಂಗಳವಾರ ಸಂಜೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಬಾವಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದ. ಅಗ್ನಿಶಾಮಕ ದಳ ಸಿಬ್ಬಂದಿಯ ಕಾರ್ಯಾಚರಣೆ ನಡೆಸಿ ಬುಧವಾರ ರಾತ್ರಿ ಬಾಲಕನ ಶವ ಹೊರ ತೆಗೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮಚ್ಚೆಂದ್ರನಾಥ ಪ್ರಮೋದ, ಪ್ರಕಾಶ, ಖಲಿಲ, ಬಸವರಾಜ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.