ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಆಕ್ರೋಶ
ಜೇವರ್ಗಿ: ಜೇವರ್ಗಿ ಮತಕ್ಷೇತ್ರ ವ್ಯಾಪ್ತಿಯ ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮದ ಮುಖ್ಯ ರಸ್ತೆ ಹಾಳಾಗಿದ್ದು, ಹಲವು ಸಲ ಗಮನಕ್ಕೆ ತಂದರೂ ಸ್ಥಳೀಯ ಶಾಸಕ ಡಾ.ಅಜಯ್ ಸಿಂಗ್ ದುರಸ್ತಿಗೆ ಕ್ರಮವಹಿಸಿಲ್ಲ ಎಂದು ಆರೋಪಿಸಿದ ಗ್ರಾಮದ ಯುವಕರು ರಸ್ತೆಯ ಹೊಂಡದಲ್ಲೇ ಭತ್ತದ ಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
‘ಅಭಿವೃದ್ಧಿ ಹರಿಕಾರ ಅಂಥ ಹೇಳುವ ಶಾಸಕ ಡಾ.ಅಜಯ್ ಸಿಂಗ್ ಅವರ ಕಣ್ಣಿಗೆ ನಮ್ಮ ಹಳ್ಳಿಗಳ ರಸ್ತೆಗಳಾಗಲಿ, ಜನರ ಜೀವನವಾಗಲಿ ಕಾಣಲ್ಲ. ಅವರಿಗೆ ಹಳ್ಳಿಗಳು ನೆನಪಾಗೋದು ಚುನಾವಣೆ ಬಂದಾಗ ಮಾತ್ರ. ರಸ್ತೆ ಬಗ್ಗೆ ಹಲವು ಸಲ ಫೋನ್ ಮಾಡಿದ್ದೀವಿ. ಮನವಿ ಪತ್ರ ಕೊಟ್ಟಿದ್ದೀವಿ. ಆದರೂ ಇದರ ಬಗ್ಗೆ ಶಾಸಕರು ಕ್ರಮವಹಿಸಿಲ್ಲ. ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಯುವಕರು ದೂರಿದರು.
ಈ ಸಂದರ್ಭದಲ್ಲಿ ಶರಣು ಬಾನಕಾರ್, ಭೀಮರಾಯ ಅರಿಕೇರಿ, ನಿಂಗಪ್ಪ ಸನ್ನತಿ, ಅನಿಲ್, ಕುಮಾರ ತಳವಾರ, ಶಿವಣ್ಣಗೌಡ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.