ADVERTISEMENT

ಕಲಬುರಗಿ: ‘ಬುದ್ಧನ ಮಾರ್ಗದಿಂದ ಶಾಂತಿ ಸ್ಥಾಪನೆ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 14:40 IST
Last Updated 5 ಸೆಪ್ಟೆಂಬರ್ 2022, 14:40 IST
ಕಲಬುರಗಿಯಲ್ಲಿ ದೇವಿಂದ್ರಪ್ಪ ಜಿಸಿ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ವರ್ಷಾವಾಸ ನಮ್ಮ ನಡೆ ಬುದ್ಧನಡೆ ಕಾರ್ಯಕ್ರಮದಲ್ಲಿ ಕೆ.ಎಸ್. ಬಂಧು, ಶಂಕರ ಕೋಡ್ಲಾ, ಸಿದ್ಧಾರ್ಥ ಚಿಮ್ಮಾಇದಲಾಯಿ, ಸುರೇಶ ವರ್ಮಾ ಇದ್ದರು
ಕಲಬುರಗಿಯಲ್ಲಿ ದೇವಿಂದ್ರಪ್ಪ ಜಿಸಿ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ವರ್ಷಾವಾಸ ನಮ್ಮ ನಡೆ ಬುದ್ಧನಡೆ ಕಾರ್ಯಕ್ರಮದಲ್ಲಿ ಕೆ.ಎಸ್. ಬಂಧು, ಶಂಕರ ಕೋಡ್ಲಾ, ಸಿದ್ಧಾರ್ಥ ಚಿಮ್ಮಾಇದಲಾಯಿ, ಸುರೇಶ ವರ್ಮಾ ಇದ್ದರು   

ಕಲಬುರಗಿ: ‘ಬರೀ ಸಂಘರ್ಷವೇ ತುಂಬಿರುವ ಇಂದಿನ ಸಮಾಜದಲ್ಲಿ ಶಾಂತಿ ನೆಲೆಸಲು ಬುದ್ಧನ ತತ್ವಗಳು ಅವಶ್ಯಕವಾಗಿವೆ’ ಎಂದು ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸುರೇಶ ಶರ್ಮಾ ಹೇಳಿದರು.

ನಗರದ ಕನ್ನಡ ಭವನದಲ್ಲಿ ದೇವಿಂದ್ರಪ್ಪ ಜಿಸಿ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ವರ್ಷಾವಾಸ ನಮ್ಮ ನಡೆ ಬುದ್ಧನೆಡೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮನೆ ಮನೆಗಳಲ್ಲಿ ಧಮ್ಮದೀಪ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಮೂಲಕ ಆಧುನಿಕತೆಯ ಭರಾಟೆಯ ಗಡಿಬಿಡಿ ಜೀವನಕ್ಕೆ ಬುದ್ಧನ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಆಗಬೇಕು. ನೆಮ್ಮದಿ ಜೀವನಕ್ಕೆ ಧಮ್ಮದೀಪ ರಹದಾರಿಯಾಗಲಿದೆ’ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಸಿದ್ದಾರ್ಥ ಚಿಮ್ಮಾಇದಲಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಎಸ್.ಬಿ. ಹರಿಕೃಷ್ಣ, ಪುಂಡಲೀಕ ಹೇರೂರ, ಮಡಿವಾಳ ದೊಡ್ಡಮನಿ, ತುಕಾರಾಮ ತಳವಾರ, ಸುಭಾಷ ಚಕ್ರವರ್ತಿ, ಸುರೇಶ, ಕುಸುಮಕರ್, ಎಂ.ಬಿ. ನಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಧಮ್ಮಜ್ಯೋತಿ ಭಂತೆ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ಟಿ. ಕಾಂಬಳೆ, ಸುಧೀರ ಸಂಗೋಳಗಿ, ಸಂಧ್ಯಾ ಕಾನೇಕರ್, ಶಂಕರ ಕೋಡ್ತಾ, ಸೂರ್ಯಕಾಂತ ಮಾಲೆ, ಅರ್ಜುನ ಭದ್ರೆ, ಡಾ.ಕೆ.ಎಸ್. ಬಂಧು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.