ಕಲಬುರಗಿ: ನಗರದ ಕಲಾ ಮಂಡಲದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು.
ಸರ್ಕಾರಿ ಕಿರಿಯ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಗಿರಿಮಲ್ಲ ಅವರು ಜೀವನ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಕಾರ ಭಾರತಿ ಸಂಸ್ಥೆಯ ಪ್ರಬಂಧಕ ಶ್ರೀನಿವಾಸ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಲೀಲಾವತಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಅಂಬುಜಾ ಮಳಖೇಡಕರ, ವಾಸುದೇವರಾವ್ ಸೇಡಂ, ಕೃಷ್ಣಾ ಜೋಶಿ, ಮಹದೇವಯ್ಯ ಕರದಳ್ಳಿ, ಮಹೇಶ ಪಾಟೀಲ, ಶ್ರೀಕಾಂತ ಮಾನೇಕರ್ ಹಾಗೂ ಇತರರು ಇದ್ದರು.
ಪ್ರಶಾಂತ ಕಂಬಾರ ಸ್ವಾಗತಿಸಿದರು. ಕಲ್ಯಾಣರಾವ ಪಾಟೀಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.