ADVERTISEMENT

‘ಬಿಲ್ಡ್‌ಟೆಕ್’ ಪ್ರದರ್ಶನ ಮೇಳ 23ರಿಂದ

ಉಚಿತ ಮಾಹಿತಿ, ರಿಯಾಯಿತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 15:28 IST
Last Updated 21 ಸೆಪ್ಟೆಂಬರ್ 2022, 15:28 IST
ಮುರಳಿಧರ
ಮುರಳಿಧರ   

ಕಲಬುರಗಿ: ‘ಸರ್ ಎಂ.ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ನಗರದ ಟ್ಯಾಂಕ್‌ ಬಂಡ್‌ ರಸ್ತೆಯ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಸೆ 23ರಿಂದ 3 ದಿನಗಳ ಕಾಲ ಬಿಲ್ಡ್‌ಟೆಕ್–2022 (ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ) ಹಮ್ಮಿಕೊಳ್ಳಲಾಗಿದೆ’ ಎಂದು ಕಲಬುರಗಿ ಘಟಕದ ಕನ್ಸಲ್ಟಿಂಗ್ ಸಿವಿಲ್ ಎಂಜನಿಯರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಮುರುಳಿಧರ ಕರಲಗಿಕರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಂದು ಬೆಳಿಗ್ಗೆ 10.30ಕ್ಕೆ ವಸ್ತುಪ್ರದರ್ಶನವನ್ನು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜನಿಯರ್ ಜಗನ್ನಾಥ ಹಲಿಂಗೆ, ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ ಉದ್ಘಾಟಿಸಲಿದ್ದಾರೆ. ಕಾಳಿಕಾ ಸ್ಟೀಲ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಅತುಲ್ ಪಮ್ಮಾರ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಅನಿಲಕುಮಾರ ಗಂಗನಿ, ಪ್ರವೀಣಕುಮಾರ ಮೋದಿ ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು.

‘ವಸ್ತು ಪ್ರದರ್ಶನದಲ್ಲಿ ಕಟ್ಟಡಕ್ಕೆ ಸಂಬಂಧಪಟ್ಟ 104 ಕಂಪನಿಗಳ ಮಳಿಗೆಗಳು ಇರಲಿದ್ದು ಉಚಿತ ಮಾಹಿತಿ ನೀಡಲಾಗುತ್ತದೆ. ಎಲ್ಲ ರೀತಿಯ ತಂತ್ರಜ್ಞಾನಗಳ ಬಗ್ಗೆ ತಿಳಿಸಲಾಗುತ್ತದೆ. ಪ್ರಾಯೋಗಿಕವಾಗಿಯೂ ಮಾಹಿತಿ ನೀಡಲಿದ್ದು ಕಂಪನಿ ಮತ್ತು ಜನರ ನಡುವಿನ ಸೇತುವೆಯಾಗಲಿದೆ. ಹೆಚ್ಚು ಖರೀದಿ ಮಾಡಿದರೆ ರಿಯಾಯಿತಿ ಸೌಲಭ್ಯವೂ ಇರಲಿದೆ’ ಎಂದು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಉಮಾಪತಿ ಹಾಗೂ ಅಸೋಶಿಯೇಶನ್‌ನ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.