ADVERTISEMENT

ಕಳಪೆ ಕಾಮಗಾರಿಯಿಂದ ಕೆಟ್ಟ ಹೆಸರು: ಶಾಸಕ ಎಂ.ವೈ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:15 IST
Last Updated 11 ಆಗಸ್ಟ್ 2024, 16:15 IST
ಅಫಜಲಪುರ ತಾಲ್ಲೂಕಿನ ಕೋಗನೂರು ಗ್ರಾಮದಲ್ಲಿ ಭಾನುವಾರ ಪ್ರೌಢಶಾಲಾ ಕಟ್ಟಡ ಕಾಮಗಾರಿಗೆ ಶಾಸಕ ಎಂ.ವೈ.ಪಾಟೀಲ್‌ ಅಡಿಗಲ್ಲು ನೆರವೇರಿಸಿದರು
ಅಫಜಲಪುರ ತಾಲ್ಲೂಕಿನ ಕೋಗನೂರು ಗ್ರಾಮದಲ್ಲಿ ಭಾನುವಾರ ಪ್ರೌಢಶಾಲಾ ಕಟ್ಟಡ ಕಾಮಗಾರಿಗೆ ಶಾಸಕ ಎಂ.ವೈ.ಪಾಟೀಲ್‌ ಅಡಿಗಲ್ಲು ನೆರವೇರಿಸಿದರು    

ಅಫಜಲಪುರ: ಶಾಲಾ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದರೆ ಗ್ರಾಮಸ್ಥರು ನನಗೂ ಬಯ್ಯುತ್ತಾರೆ, ನಿಮಗೂ ಬಯ್ಯುತ್ತಾರೆ. ಅದಕ್ಕಾಗಿ ಒಳ್ಳೆಯ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಿ’ ಎಂದು ಶಾಸಕ ಎಂ.ವೈ.ಪಾಟೀಲ್ ಗುತ್ತಿಗೆದಾರರಿಗೆ ಹೇಳಿದರು.

ತಾಲ್ಲೂಕಿನ ಕೋಗನೂರು ಗ್ರಾಮದಲ್ಲಿ ಭಾನುವಾರ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ಇಲಾಖೆಯ ನಬಾರ್ಡ್ ಆರ್.ಐ.ಡಿ.ಎಫ್ - 28 ಯೋಜನೆ ಅಡಿಯಲ್ಲಿ ಅಂದಾಜು ₹1 ಕೋಟಿ 57 ಲಕ್ಷ ರೂಪಾಯಿ ವೆಚ್ಚದ ಪ್ರೌಢಶಾಲಾ ಕಟ್ಟಡ ಕಾಮಗಾರಿಗೆ ಅಡಿಗಲ್ಲು ‌ನೆರವೇರಿಸಿ ಮಾತನಾಡಿದ ಅವರು, ‘ಮೇಲಿಂದ ಮೇಲೆ ಅನುದಾನ ಬರುವುದಿಲ್ಲ. ಅದಕ್ಕಾಗಿ ಬಂದಿರುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.‌

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾಂತಾಬಾಯಿ ಮಿಂಚನ, ಎಇಇ ಬಾಬುರಾವ ಜ್ಯೋತಿ, ಎಸ್‌ಡಿಎಂಸಿ ಅಧ್ಯಕ್ಷೆ ಸುನಿತಾ ಜಮಾದಾರ, ಪಿಎಸ್ಐ ವಾತ್ಸಲ್ಯ, ಪ್ರಮುಖರಾದ ಶರಣು ಪಡಶೆಟ್ಟಿ, ನೀಲಕಂಠ ಮುಲಗೆ, ನಾಗೇಂದ್ರಪ್ಪ ಮೇತ್ರೆ, ಶರಣಗೌಡ ಪಾಟೀಲ್, ಪ್ರಭುಲಿಂಗ ಮಾಲಿಪಾಟೀಲ್, ಶರಣು ಕುಲಾಲಿ, ಮಹಾಂತ ಮಿಂಚಿನ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಕೌಸರ ಬೇಗಂ, ಶೃತಿ ಕುಲಕರ್ಣಿ, ಧೂಳೇಶ ಪಾಟೀಲ್, ಸಚಿನ್‌ ಲಿಂಗಶೆಟ್ಟಿ, ಮಹಾದೇವಪ್ಪ ಅಪ್ಪಗೋಳ ಇತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.