ADVERTISEMENT

ಅಫಜಲಪುರ: ಕೇಂದ್ರ ಸರ್ಕಾರದ ನೀತಿ ಖಂಡಿಸಿ ಮಾರ್ಚ್ 28ರಂದು ಬಂದ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 6:14 IST
Last Updated 21 ಫೆಬ್ರುವರಿ 2022, 6:14 IST
ಅಫಜಲಪುರದಲ್ಲಿಎಸ್‌ಐಟಿಯು ತಾಲ್ಲೂಕ ಸಮಿತಿ ಸಮಾವೇಶದಲ್ಲಿ ಜಿಲ್ಲಾ ಸಂಚಾಲಕಿ ಶಾಂತಾ ಘಂಟೆ ಮಾತನಾಡಿದರು
ಅಫಜಲಪುರದಲ್ಲಿಎಸ್‌ಐಟಿಯು ತಾಲ್ಲೂಕ ಸಮಿತಿ ಸಮಾವೇಶದಲ್ಲಿ ಜಿಲ್ಲಾ ಸಂಚಾಲಕಿ ಶಾಂತಾ ಘಂಟೆ ಮಾತನಾಡಿದರು   

ಅಫಜಲಪುರ: ‘ಕೇಂದ್ರ ಬಜೆಟ್‌ನಲ್ಲಿ ಯುವಜನತೆ, ಅಸಂಘಟಿತ ಕಾರ್ಮಿಕರನ್ನು ನಿರ್ಲಕ್ಷ್ಯಿಸಿ ಕಾರ್ಪೊರೇಟ್ ಕಂಪನಿ ಪರವಾಗಿ ಬಜೆಟ್ ಮಂಡಿಸಿದ್ದಾರೆ. ಇದನ್ನು ಖಂಡಿಸಿ ಮಾರ್ಚ್28 ರಂದು ಅಖಿಲ ಭಾರತ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಕರೆಯ ಮೇರೆಗೆ ತಾಲ್ಲೂಕಿನಲ್ಲಿ ಬಂದ್ ಆಚರಣೆ ಮಾಡಲಾಗುವುದು. 29 ರಂದು ಕಲಬುರಗಿಯಲ್ಲಿಯೂ ಬಂದ್ ಮಾಡಲಾಗುವುದು’ ಎಂದು ಸಿಐಟಿಯು ಜಿಲ್ಲಾ ಸಂಚಾಲಕಿ ಶಾಂತಾ ಘಂಟೆ ತಿಳಿಸಿದರು.

ಅಫಜಲಪುರ ಅಂಬೇಡ್ಕರ್ ಉದ್ಯಾನದಲ್ಲಿ ಏರ್ಪಡಿಸಿದ್ದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕ ಸಮಿತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಹಲವಾರು ವರ್ಷಗಳಿಂದ ಅಂಗನವಾಡಿ, ಬಿಸಿಯೂಟ ಮತ್ತು ಪಂಚಾಯಿತಿ, ಹಾಸ್ಟೆಲ್ ನೌಕರರ ಗೌರವಧನ
ಹೆಚ್ಚಳ ಮಾಡದೆ ಇರುವ ನೀತಿಯನ್ನು ಖಂಡಿಸಿ ಮಾರ್ಚ್ 4ರಂದು ನಡೆಯುವ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಾರ್ಮಿಕರು ಮಾತಮಾಡಬೇಕು ಎಂದುತಿಳಿಸಿದರು.

ADVERTISEMENT

ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ, ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ ಇವತ್ತಿನ ದೇಶ ಮತ್ತು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ದುಡಿಯುವ ಜನತೆಯನ್ನು ಕಡೆಗಣಿಸಿ ಕಾರ್ಪೊರೇಟ್ ಕಂಪನಿಗಳ
ಪರವಾಗಿ ಬಜೆಟ್ ಮಂಡನೆ ಮಾಡುತ್ತಿರುವುದು ನಾವುದುಡಿಯುವ ಜನತೆ ಪ್ರತಿರೋಧ ಮಾಡಿದಾಗ ಮಾತ್ರ ನಾವು ಯಶಸ್ಸು ಕಾಣಲು ಸಾಧ್ಯ ಎಂದುಹೇಳಿದರು.

ಸಿದ್ದಮ್ಮ ಬೈರಾಮಡಗಿ, ಕಲಾವತಿ ಗೊಬ್ಬುರ್, ಕಾಂಚನ ಕಾಂಬಳೆ, ಅಣ್ಣಪ್ಪ ಹಡಲಿಗೆ, ಗುರು ಪಾಟೀಲ್, ಬಿಸ್ಮಿಲ್ಲಾ ಖೇಡಗಿ, ಶಾಂತಾ ಕುಂಬಾರ್, ಮಹಾನಂದ ಕಲ್ಲೂರ್, ಶಿವಲೀಲಾ ಪಾಟೀಲ್ ಸೇರಿದಂತೆ ಮುಕಂಡರು, ಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.