ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ತಾಂಡಾಕ್ಕೆ ಬಂದ ಬಸ್
ಚಿಂಚೋಳಿ: ಸಾರಿಗೆ ಸೌಲಭ್ಯದಿಂದ ವಂಚಿತವಾಗಿದ್ದ ನಾಗಾಈದಲಾಯಿ ತಾಂಡಾಕ್ಕೆ ಮೊದಲ ಬಾರಿಗೆ ಬಸ್ ಸಂಚಾರ ಆರಂಭವಾಗಿದೆ.
ತಾಂಡಾವಾಸಿಗಳು ಮೊದಲ ಬಾರಿಗೆ ತಮ್ಮ ತಾಂಡಾದಲ್ಲಿ ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದರು.
ತಾಂಡಾದಿಂದ 35ಕ್ಕೂ ಹೆಚ್ಚು ಮಕ್ಕಳು ನಡೆದುಕೊಂಡು 4.5 ಕಿ.ಮೀ. ದೂರದ ನಾಗಾಈದಲಾಯಿ ಗ್ರಾಮಕ್ಕೆ ನಿತ್ಯ ಹೋಗಿ- ಬರುತ್ತಿದ್ದರು. ಈ ಕುರಿತು 'ಪ್ರಜಾವಾಣಿ' ಜುಲೈ 14ರ ಸಂಚಿಕೆಯಲ್ಲಿ 'ವಿದ್ಯಾರ್ಥಿಗಳಿಗೆ ಕಾಲ್ನಡಿಗೆ ಶಿಕ್ಷೆ' ಶೀರ್ಷಿಕೆ ಜತೆಗೆ ಬಾಕ್ಸ್ ಸುದ್ದಿಯಲ್ಲಿ ತಾಂಡಾ ಮಕ್ಕಳಿಗೆ '9 ಕಿ.ಮೀ ಕಾಲ್ನಡಿಗೆ' ಶೀರ್ಷೀಕೆ ಅಡಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರ ನಿರ್ದೇಶನದ ಮೇರೆಗೆ ಚಿಂಚೋಳಿ ಘಟಕ ವ್ಯವಸ್ಥಾಪಕ ಅಶೋಕ ಪಾಟೀಲ ಬಸ್ ಓಡಿಸಲು ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ 10.05ಕ್ಕೆ ಬಸ್ ನಮ್ಮ ತಾಂಡಾಕ್ಕೆ ಬಂದಿದೆ. ಇದು ಇನ್ನೂ 9.30ಕ್ಕೆ ಬಂದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯಕುಮಾರ ಜಾಧವ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.