ADVERTISEMENT

ಡೀಸೆಲ್ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಬಸ್; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 7:11 IST
Last Updated 6 ಡಿಸೆಂಬರ್ 2022, 7:11 IST
   

ಚಿಂಚೋಳಿ(ಕಲಬುರಗಿ): ಕಲಬುರಗಿಯಿಂದ ಚಿಂಚೋಳಿಗೆ ಬರುತ್ತಿದ್ದ ಹೈದರಾಬಾದ್- ಕಲಬುರಗಿ ಚಿಂಚೋಳಿ ಮಾರ್ಗದ ಬಸ್ ಮಾರ್ಗ ಮಧ್ಯೆ ಕೋರವಾರ ಬಳಿ ನಿಂತ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಡೀಸೆಲ್ ಖಾಲಿ ಆಗಿದ್ದರಿಂದ ಬಸ್ ಹಠಾತ್ ಬಂದಾಗಿದ್ದರಿಂದ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.

ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳೇ ಹೆಚ್ಚಾಗಿದ್ದ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಬಸ್ ಮಾರ್ಗ ಮಧ್ಯೆ ನಿಂತಿದ್ದರಿಂದ ಪ್ರಯಾಣಿಕರು ಅಲ್ಲಿಯೇ ನಿಂತು ಬೇರೆ ಬಸ್ ಬಂದ ಮೇಲೆ ಅದರಲ್ಲಿ ಹತ್ತಿ ಪ್ರಯಾಣಿಕರು ಪ್ರಯಾಣ ಮಾಡಿದರು. ಡೀಸೆಲ್ ಖಾಲಿಯಾಗಿರುವುದೇ ಇದಕ್ಕೆ ಕಾರಣ ಎಂದು ಚಾಲಕ ಮತ್ತು ನಿರ್ವಾಹಕರು ತಮಗೆ ತಿಳಿಸಿದ್ದರಿಂದ ತಾವು ಬೇರೆ ಬಸ್ಸಿಗಾಗಿ ಕಾಯ್ದು ಬೇರೆ ಬಸ್ ಬಂದ ಮೇಲೆ ಪ್ರಯಾಣ ನಡೆಸಿರುವುದಾಗಿ ಪ್ರಯಾಣಿಕರೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ಈ ಕುರಿತು ಚಿಂಚೋಳಿ ಬಸ್ ಡಿಪೋ ವ್ಯವಸ್ಥಾಪಕ ಅಶೋಕ ಪಾಟೀಲರನ್ನು ಪ್ರಜಾವಾಣಿ ಸಂಪರ್ಕಿಸಿದಾಗ 'ಬಸ್ಸಿನಲ್ಲಿ ಡೀಸೆಲ್ ಖಾಲಿಯಾಗಿರಲಿಲ್ಲ. ಆದರೆ, ಏರ್ ಲಾಕ್ ಆಗಿತ್ತು' ಎಂದು ಪ್ರತಿಕ್ರಿಯಿಸಿದ್ದಾರೆ. ಕಾಳಗಿ ಬಸ್ ಘಟಕಕ್ಕೆ ತೆರಳಿ ಸರಿಪಡಿಸಿಕೊಂಡು ಬಂದಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.