ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಬಾಪೂರ–ಮೆಹಬೂಬನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತಾಲ್ಲೂಕಿನ ತುಮಕುಂಟಾ ನಾಗಾಈದಲಾಯಿ ಮಧ್ಯೆ ಸಂಭವಿಸಿದ ಕಾರು ಮತ್ತು ಸಾರಿಗೆ ಬಸ್ ನಡುವಿನ ಡಿಕ್ಕಿ ಘಟನೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ.
ಕಾರು ಚಾಲೂ ಆಗಲು ತೊಂದರೆ ಕಾಣಿಸಿಕೊಂಡಿದೆ. ಆಗ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ದುರಸ್ತಿ ಮಾಡುವಾಗ ಕಾರು ಏಕಾಏಕಿ ಚಾಲೂ ಆಗಿದೆ. ಆಗ ಕಾರಿನ ಎದುರು ವ್ಯಕ್ತಿಯೊಬ್ಬ ಬರುತ್ತಿದ್ದರು. ಅವರಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರಿನ ಚಾಲಕ ಎದುರಿಗೆ ಬರುತ್ತಿದ್ದ ಬಸ್ಸಿಗೆ ಗುದ್ದಿದ್ದಾರೆ. ಆಗ ಕಾರಿನ ಬಲೂನ್ ತೆರೆದುಕೊಂಡಿದೆ.
ಕಾರು ನುಜ್ಜು ಗುಜ್ಜಾಗಿ ಬಿಡಿ ಭಾಗಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆದರೆ ಘಟನೆಯಲ್ಲಿ ಯಾರಿಗೂ ಭಾರಿ ಗಾಯವಾಗಿಲ್ಲ ಎಂದು ಚಿಂಚೋಳಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎ.ಎಸ್. ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.