ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಮಾದಬಾಳ ತಾಂಡಾದ ಹತ್ತಿರ ಭಾನುವಾರ ಬೈಕ್ ಮತ್ತು ಕಾರು ಮಧ್ಯೆ ಡಿಕ್ಕಿಯಾಗಿ ಬೈಕ್ ಸವಾರ, ಬಳೂರ್ಗಿ ತಾಂಡಾ ನಿವಾಸಿ ವಿಕಾಸ ರಾಠೋಡ (27) ಮೃತಪಟ್ಟಿದ್ದಾರೆ.
ಅಫಜಲಪುರ ಪಟ್ಟಣಕ್ಕೆ ಸಂಬಂಧಿಕರನ್ನು ಬೈಕ್ ಮೇಲೆ ಬಿಡಲು ಬಂದ ವಿಕಾಸ ರಾಠೋಡ ಮರಳಿ ಸ್ವಗ್ರಾಮ ಬಳೂರ್ಗಿಗೆ ತೆರಳುವಾಗ ಮಹಾರಾಷ್ಟ್ರದ ನೋಂದಣಿ ಇರುವ ಇನ್ನೋವಾ ಕಾರ್‌ಗೆ ಬೈಕ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ವಿಕಾಸ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ಶವವನ್ನು ಆಂಬುಲೆನ್ಸ್ ಮೂಲಕ ಹತ್ತಿರದ ಸರ್ಕಾರಿ ಆಸ್ಪತ್ರೆಯ ಶವಾಗಾರ ಪರೀಕ್ಷಾ ಕೊಠಡಿಗೆ ರವಾನಿಸಲಾಗಿದೆ. ವಿಕಾಸಗೆ ಮೂವರು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು
ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.