ADVERTISEMENT

ಆಳಂದ: ಜಾನುವಾರುಗಳ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 11:13 IST
Last Updated 9 ಡಿಸೆಂಬರ್ 2021, 11:13 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಜಾನುವಾರುಗಳ ಜಾತ್ರೆಗೆ ಶಿವದೇವಿ ಮಾತಾಜೀ ಚಾಲನೆ ನೀಡಿದರು. ಅಭಿನವ ಶಿವಲಿಂಗ ಸ್ವಾಮೀಜಿ, ಡಾಮಹಾಂತೇಶ ಪಾಟೀಲ ಇದ್ದರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಜಾನುವಾರುಗಳ ಜಾತ್ರೆಗೆ ಶಿವದೇವಿ ಮಾತಾಜೀ ಚಾಲನೆ ನೀಡಿದರು. ಅಭಿನವ ಶಿವಲಿಂಗ ಸ್ವಾಮೀಜಿ, ಡಾಮಹಾಂತೇಶ ಪಾಟೀಲ ಇದ್ದರು   

ಆಳಂದ: ‘ಶರಣರು ಸಕಲ ಜೀವಿಗಳ ಕಲ್ಯಾಣ ಬಯಸಿದರು, ಅದಕ್ಕೆ ಎಲ್ಲ ಜೀವಿಗಳ ಸಂರಕ್ಷಣೆಯ ಕಾಳಜಿ ಬೆಳೆಸಿಕೊಳ್ಳುವದು ಅಗತ್ಯವಾಗಿದೆ’ ಎಂದು ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಲಿಂ.ಶಾಂತಲಿಂಗೇಶ್ವರರು ಹಾಗೂ ಶಿವಲಿಂಗೇಶ್ವರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡ ಜಾನುವಾರು ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಜಾನುವಾರುಗಳು ಆದಾಯದ ಮೂಲವಾಗಿ ಪಾಲನೆ ಮಾಡದೆ ಅವುಗಳ ಸಂರಕ್ಷಣೆಯು ನಮ್ಮ ಸಂಸ್ಕೃತಿಯ ಪವಿತ್ರ ಕಾರ್ಯವಾಗಿದೆ. ಪ್ರತಿಯೊಂದು ಜಾನುವಾರುಗಳು ಮನುಷ್ಯನಿಗೆ ಅವಶ್ಯಕವಾಗಿವೆ ಎಂದರು.

ADVERTISEMENT

ಮಾದನ ಹಿಪ್ಪರಗಿಯ ಶಿವಯೋಗಾಶ್ರಮದ ಶಿವದೇವಿ ಮಾತಾಜೀ ಜಾನುವಾರು ಸಂತೆ ಉದ್ಘಾಟಿಸಿದರು.

ಪಶು ಸಂಗೋಪನಾ ಅಧಿಕಾರಿ ಡಾ.ಮಹಾಂತೇಶ ಪಾಟೀಲ, ಮಂಜುನಾಥ , ಪ್ರಮುಖರಾದ ಮಲ್ಲಯ್ಯ ಸ್ವಾಮಿ, ಬಸಯ್ಯ ಸ್ವಾಮಿ, ಸಿದ್ದರಾಮ ಅರಳಿಮರ, ರೇವಪ್ಪ ದುದಗಿ, ರೇವಪ್ಪ ತೋಳನೂರೆ ಮತ್ತಿತರರು ಇದ್ದರು. ಮಾದನ ಹಿಪ್ಪರಗಿ, ಮದಗುಣಕಿ, ಚಲಗೇರಾ, ದರ್ಗಾ ಶಿರೂರು, ನಿಂಗದಳ್ಲಿ, ನಿಂಬಾಳ ಸೇರಿದಂತೆ ನೆರಯ ಮೈಂದರ್ಗಿ, ಧುಧನಿ ಗ್ರಾಮದ ರೈತರು ಸಹ ಜಾತ್ರೆಯಲ್ಲಿ ತಮ್ಮ ಜಾನುವಾರು ತಂದಿದ್ದರು.

ಐದು ದಿನಗಳ ಕಾಲ ಜಾನುವಾರು ಸಂತೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.