ಕಲಬುರಗಿ: ಶಹಾಬಾದ್ ತಾಲ್ಲೂಕಿನ ಮುತಗಾದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ತಾಲ್ಲೂಕಿನ ಜೀವಣಗಿ ಗ್ರಾಮದ ಮಲ್ಲಿಕಾರ್ಜುನ ಪಾಟೀಲ, ಮುತಗಾ ಗ್ರಾಮದ ಸಾಬಣ್ಣ ಪಟ್ಟೆದಾರ ಹಾಗೂ ಶಿವರಾಜ ನಾಟಿಕಾರ ಬಂಧಿತರು’ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಲವು ವರ್ಷಗಳಿಂದ ಮೂರ್ತಿ ಸುತ್ತಲಿನ ಪ್ರದೇಶ ಅಭಿವೃದ್ಧಿ ಆಗಿಲ್ಲ. ಮೂರ್ತಿ ಭಗ್ನಗೊಳಿಸಿದರೆ ಸುದ್ದಿಯಾಗುತ್ತದೆ. ಜನರ ಗಮನ ಸೆಳೆಯುವ ಜೊತೆಗೆ ಅಭಿವೃದ್ಧಿಗೆ ಹಣವೂ ಹರಿದು ಬರುತ್ತೆ ಎಂದುಕೊಂಡು ಆರೋಪಿಗಳು ಈ ಕೃತ್ಯ ಎಸೆಗಿದ್ದರು‘ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.