ADVERTISEMENT

ವಿದ್ಯುತ್ ತಂತಿ ತಗುಲಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 16:36 IST
Last Updated 24 ಸೆಪ್ಟೆಂಬರ್ 2023, 16:36 IST
ಅಭಿಷೇಕ್ ಪವಾರ್
ಅಭಿಷೇಕ್ ಪವಾರ್   

ಅಫಜಲಪುರ: ಪಟ್ಟಣದ ವಾರ್ಡ್ ನಂಬರ್ 5ರ ಮೌಲಾಲಿ ಬಡಾವಣೆಯಲ್ಲಿ ಭಾನುವಾರ ವಿದ್ಯುತ್‌ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮನೆ ಮುಂದೆ ಕೊಳವೆಬಾವಿ ಇದ್ದು, ಕೊಳವೆ ಬಾವಿ ಹತ್ತಿರ ನೀರಿನ ತೊಟ್ಟಿಯಿಂದ ತನ್ನ ಮನೆಗೆ ನೀರು ಪೂರೈಕೆ ಮಾಡಲು ವಿದ್ಯುತ್ ಮೋಟರನ್ನು ಅಳವಡಿಸುವಾಗ ತಂತಿ ತಗುಲಿ ಅಭಿಷೇಕ ಪವಾರ(12) ಎಂಬ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ತಿಳಿಸಿದರು.

ಕುಟುಂಬದವರ ಆಕ್ರಂದನ ಮುಗಿಲುಮುಟ್ಟುವಂತಾಗಿತ್ತು. ಮೃತ ಬಾಲಕನ ಕುಟುಂಬ ಕಡುಬಡತನದಲ್ಲಿದ್ದು, ಸರ್ಕಾರ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.