ಚಿಂಚೋಳಿ: ಪಟ್ಟಣದ ದೇವಡಿ ಬಳಿಯ ವೆಂಕಟೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವ ಬುಧವಾರ ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಡಾ.ಕಿಶನರಾವ್ ಕಾಟಾಪುರ ತಿಳಿಸಿದ್ದಾರೆ.
ಫೆ.6ರಿಂದ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಶ್ರೀನಿವಾಸ ಆಚಾರ್ಯ ಸೊಂಡೂರು ಅವರಿಂದ ಎರಡುದಿನ ಭಾಗವತ ಪ್ರವಚನ, ನಿತ್ಯ ಅನ್ನ ದಾಸೋಹ, ಭಜನೆ ನಿತ್ಯ ನಡೆಸಿಕೊಂಡ ಬರಲಾಗುತ್ತಿದೆ. ಸಂಜೆ 6 ಗಂಟೆಗೆ ದೇವಾಲಯದ ಎದುರಿನ ಪ್ರಾಂಗಣದಲ್ಲಿ ರಥೋತ್ಸವ ಜರುಗಲಿದೆ. ಫೆ.13ರಂದು ಅನ್ನದಾಸೋಹ ಹಾಗೂ ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.