ADVERTISEMENT

ಚಿಂಚೋಳಿ: ಬೆಳೆಗಾರರ ಬಾಳು ಬೆಳಗಿದ ಬಾಳೆ

​ಪ್ರಜಾವಾಣಿ ವಾರ್ತೆ
ಜಗನ್ನಾಥ ಡಿ.ಶೇರಿಕಾರ
Published 12 ಸೆಪ್ಟೆಂಬರ್ 2025, 6:39 IST
Last Updated 12 ಸೆಪ್ಟೆಂಬರ್ 2025, 6:39 IST
ಚಿಂಚೋಳಿ ತಾಲ್ಲೂಕು ದೇಗಲಮಡಿಯ ರೈತ ವೃತೇಂದ್ರರೆಡ್ಡಿ ಅವರ ಬೆಳೆದ ಬಾಳೆ ತೋಟದಲ್ಲಿ ಗಿಡಿಗಳು ದೊಡ್ಡ ಗೊನೆಗಳು ಬಿಟ್ಟಿರುವುದು
ಚಿಂಚೋಳಿ ತಾಲ್ಲೂಕು ದೇಗಲಮಡಿಯ ರೈತ ವೃತೇಂದ್ರರೆಡ್ಡಿ ಅವರ ಬೆಳೆದ ಬಾಳೆ ತೋಟದಲ್ಲಿ ಗಿಡಿಗಳು ದೊಡ್ಡ ಗೊನೆಗಳು ಬಿಟ್ಟಿರುವುದು   

ಚಿಂಚೋಳಿ: ತೋಟದಲ್ಲಿ ಬಾಳೆ ಗಿಡಗಳು ಬೆಳೆಗಾರ ನೀರಲ್ಲಿ ನಿಲ್ಲಿಸಿದರೆ (ಯಥೆಚ್ಚ ನೀರು ಕೊಟ್ಟು) ಬೆಳೆಗಾರರನಿಗೆ ಊರೊಳಗೆ ಎದೆಯುಬ್ಬಿಸಿ ನಿಲ್ಲುವಂತೆ ಬಾಳೆ ಮಾಡುತ್ತದೆ ಎಂಬುದು ಬಾಳೆ ಬೇಸಾಯಗಾರರಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತಾಗಿದೆ.
ಪ್ರಸಕ್ತ ವರ್ಷ ಬಾಳೆ ಬೆಳೆ ಬೇಸಾಯಗಾರರಿಗೆ ಈ ಮಾತು ಸಂಪೂರ್ಣ ಅನ್ವಯಿಸುತ್ತಿದೆ. ಉತ್ತಮ ಮಳೆ ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯುತ್ತಿರುವುದರಿಂದ ಬೆಳೆಗಾರರು ಹೆಚ್ಚಿನ ಆಯಾಯ ಪಡೆದು ಊರೋಳಗೆ ಎದೆಯುಬ್ಬಿಸಿ ನಡೆಯುವಂತಾಗಿದೆ. ಈ ಮೂಲಕ ಬಾಳೆ ಬೆಳೆಗಾರರ ಬಾಳು ಬೆಳಗಿದೆ.
ತಾಲ್ಲೂಕಿನಲ್ಲಿ ಫಲವತ್ತಾದ ಭೂಮಿ, ಜಲ ಸಂಪತ್ತು ಹಾಗೂ ಪೂರಕ ಹವಾಮಾನ ವಿರುವುದರಿಂದ ಬಾಳೆ ಬೇಸಾಯಕ್ಕೆ ವಿಪುಲ ಅವಕಾಶಗಳಿವೆ.
ಬೆಳೆಗಾರರಿಗೆ ಪ್ರತಿ ಕೆಜಿಗೆ ರೂ 18-20 ದರ ಲಭಿಸಿದ್ದು, ಬೆಳೆಗಾರರು ಕೈತುಂಬಾ ಆದಾಯ ಪಡೆದು ಸಂತಸಗೊAಡಿದ್ದಾರೆ. ತಾಲ್ಲೂಕಿನ ದೇಗಲಮಡಿಯ ಪ್ರಗತಿಪರ ರೈತ ವೃತೇಂದ್ರರೆಡ್ಡಿ ಅವರು ಸುಮಾರು 15 ಎಕರೆಯಲ್ಲಿ ಬಾಳೆ ಬೆಳೆದು ಉತ್ತಮ ಆದಾಯ ಪಡೆಯುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.
ಜತೆಗೆ ಕಂಪ್ಯೂಟರ್ ಎಂಜಿನಿಯರಿAಗ್ ಪದವಿಧರನಾಗಿರುವ ಪುತ್ರ ಶೈಲೇಂದ್ರರೆಡ್ಡಿ ಅವರೂ ತಂದೆಯ ಜತೆಗೆ ಕೈಜೋಡಿಸಿದ್ದರಿಂದ ಬಾಳೆ ಬೇಸಾಯದಲ್ಲಿ ಇವರು ಯಶಸ್ವಿಯಾಗಿ ಬಂಪರ್ ಆದಾಯ ಪಡೆದು ಗಮನ ಸೆಳೆದಿದ್ದಾರೆ.
ಒಂದು ಎಕರೆ ಬಾಳೆ ಬೇಸಾಯ ಬೇಸಾಯಕ್ಕೆ ಎಕರೆಗೆ ಕನಿಷ್ಠ ರೂ 50 ಸಾವಿರದಿಂದ 70 ಸಾವಿರ ಖರ್ಚು ಮಾಡಿದ ಇವರು ಎಕರೆಗೆ ಸರಾಸರಿ 25 ಟನ್ ಇಳುವರಿ ಪಡೆದಿದ್ದಾರೆ.
4 ವರ್ಷಗಳ ಹಿಂದಷ್ಟೆ ಪ್ರತಿ ಕೆಜಿಗೆ ರೂ 3-4ಕ್ಕೆ ಕುಸಿದಿದ್ದ ಬಾಳೆಯ ದರ ಕಳೆದ ವರ್ಷ ರೂ 16-17ಕ್ಕೆ ಕೆಜಿ ಹಾಗೂ ಪ್ರಸಕ್ತ ವರ್ಷ ಕೆಜಿಗೆ 18ರಿಂದ20 ದರ ಮಾರುಕಟ್ಟೆಯಲ್ಲಿ ಲಭಿಸಿದ್ದರಿಂದ ರೈತರ ಚಿತ್ತ ಬಾಳೆಯತ್ತ ನೆಟ್ಟಿದೆ.
ಅಂಗಾಂಶ ಕೃಷಿಯ ಜಿ-9 ಬಾಳೆ ಸಸಿ ತಂದು ನೆಟ್ಟು ಪೋಷಿಸಿ ರೋಗ ರುಜಿನಗಳಿಂದ ನಿರ್ವಹಣೆ ಮಾಡಿ, ಕಾಲ ಕಾಲಕ್ಕೆ ತಿಪ್ಪೆಗೊಬ್ಬರ, ರಸಗೊಬ್ಬರ ಹಾಕಿ ಪ್ರಕೃತಿ ವಿಕೋಪಗಳಿಂದ ರಕ್ಷಿಸಿಕೊಂಡ ಮೇಲೆ ಬೆಳೆಗಾರರ ಕೈಗೆ ಫಸಲು ದೊರೆಯುತ್ತದೆ. ಹೀಗೆ ಫಸಲು ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ದರ ನಿರೀಕ್ಷಿತ ಮಟ್ಟದಲ್ಲಿದ್ದರೆ ಬೆಳೆಗಾರ ಎದೆಯುಬ್ಬಿಸಿ ನಡೆಯುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಎರಡು ವರ್ಷಗಳಿಂದ ಬಾಳೆ ಬೆಳೆಗಾರರಿಗೆ ನಿರೀಕ್ಷಿತ ಬೆಳೆ ಸಿಕ್ಕಿದ್ದರಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಆಗಸ್ಟ್ ಕೊನೆಯವರೆಗೂ ರೂ 18 ದರವಿತ್ತು ಆದರೆ ಈಗ ರೂ 12ಕ್ಕೆ ಇಳಿದಿದೆ. ಪ್ರತಿಕೆಜಿ ಬಾಳೆಗೆ ಮಾರುಕಟ್ಟೆಯಲ್ಲಿ ರೂ 8ಕ್ಕಿಂತ ಕಡಿಮೆ ಕುಸಿದರೆ ಬೆಳೆಗಾರರಿಗೆ ಆದಾಯ ಬರುವುದಿಲ್ಲ ಆದರೆ ರೂ12ರಿಂದ 20ರ ದರದಲ್ಲಿ ಮಾರಾಟವಾದರೆ ಬೆಳೆಗಾರ ಬೇರೆ ಬೆಳೆಯತ್ತ ಕಣ್ಣು ಹಾಯಿಸದೇ ಬಾಳೆಯತ್ತ ತಮ್ಮ ಚಿತ್ತ ಹರಿಸುತ್ತಾರೆ.
ಮಾರುಕಟ್ಟೆ: ತಾಲ್ಲೂಕಿನಲ್ಲಿ ಬೆಳೆದ ಬಾಳೆ ಹಣ್ಣುಗಳಿಗೆ ನೆರೆಯ ತೆಲಂಗಾಣದ ಹೈದರಾಬಾದ ಉತ್ತಮ ಮಾರುಕಟ್ಟೆಯಾಗಿದೆ. ಇದರ ಜತೆಗೆ ಬೀದರ್, ಯದಗಿರಿ ಮತ್ತು ರಾಯಚೂರು ನಗರಗಳಿಗೂ ಇಲ್ಲಿನ ಹಣ್ಣುಗಳು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ವೃತೇಂದ್ರರೆಡ್ಡಿ ದೇಗಲಮಡಿ.
600 ಎಕರೆ ಬಾಳೆ:
ತಾಲ್ಲೂಕಿನಲ್ಲಿ 600 ಎಕರೆ ಪ್ರದೇಶದಲ್ಲಿ ಬಾಳೆ ಬೇಸಾಯವಿದೆ. ತಾಲ್ಲೂಕಿನ ದೇಗಲಮಡಿ, ಅಣವಾರ, ಐನೊಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕ ರಾಜಕುಮಾರ ಗೋವಿನ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಾಳೆ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಳಬಿಸಿದೆ ಇದರಿಂದ ರೈತರು ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ
ಜನಾರ್ದನರೆಡ್ಡಿ ಹೈದರಾಬಾದ
ಬಾಳೆ ಹಣ್ಣುಗಳಿಗೆ ಕ್ರಿಮಿ ಕೀಟಗಳಿಂದ ಮತ್ತು ಹವಾಮಾನ ವೈಪರಿತ್ಯದಿಂದ ರೋಗರುಜಿನಗಳಿಂದ ತಪ್ಪಿಸಲು ಕವರ್ ಹಾಕಿರುವುದು
ಫಲಹೊತ್ತು ನಿಂತ ಬಾಳೆ ಗಿಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.