
ಆಳಂದ: ‘ವೈವಿಧ್ಯಮಯ ಸಂಸ್ಕೃತಿ, ಆಚರಣೆ, ಭಾಷೆ ಹಾಗೂ ಧರ್ಮಗಳ ನಡುವೆಯೂ ನಾವೂ ಸಂವಿಧಾನದ ಕಾರಣದಿಂದ ಸೌಹಾರ್ದ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಿದೆ’ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಸೋಮವಾರ ಆಳಂದ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಕೋಮುವಾದಿಗಳು ಮತ್ತು ಬಂಡವಾಳಶಾಹಿಗಳಿಂದ ದೇಶದ ಅಖಂಡತೆ ಮತ್ತು ಪ್ರಜಾಪ್ರಭುತ್ವಕ್ಕೆ ಆತಂಕವಿದೆ. ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆಯುತ್ತಿದ್ದು, ನಾವೂ ಎಚ್ಚರವಹಿಸಬೇಕಿದೆ. ದೇಶದ ಅಭಿವೃದ್ಧಿ ಮತ್ತು ವ್ಯಕ್ತಿ ಸ್ವತಂತ್ರ , ಹಕ್ಕುಗಳಿಗೆ ರಕ್ಷಣೆ ನೀಡುವಲ್ಲಿ ಸಂವಿಧಾನದ ಪಾತ್ರ ಮುಖ್ಯವಾಗಿದೆ’ ಎಂದರು.
ತಹಶೀಲ್ದಾರ್ ಅಣ್ಣರಾಯ ಪಾಟೀಲ, ದುತ್ತರಗಾಂವ ಪ್ರೌಢಶಾಲೆ ಶಿಕ್ಷಕಿ ರಾಜಶ್ರೀ ಒಂಟಿ, ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಮಾತನಾಡಿದರು. ಬಿಇಒ ವಿ.ರಂಗಸ್ವಾಮಿ ಶೆಟ್ಟಿ, ಡಿವೈಎಸ್‌ಪಿ ತಮ್ಮರಾಯ ಪಾಟೀಲ, ವಿಜಯಲಕ್ಷ್ಮಿ ಹೋಳ್ಕರ್, ಯಲ್ಲಪ್ಪ ಇಂಗಳೆ, ಹೋನ್ನೆಶ, ಸಂಗಮೇಶ ಬಿರಾದಾರ, ಬನಸಿದ್ದಪ್ಪ ಬಿರಾದಾರ ಉಪಸ್ಥಿತರಿದ್ದರು.
ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಆಡಳಿತ ಭವನ:
ಪಟ್ಟಣದ ತಾಲ್ಲೂಕು ಆಡಳಿತ ಭವನದ ಆವರಣದಲ್ಲಿ ತಹಶೀಲ್ದಾರ್ ಅಣ್ಣಾರಾವ ಪಾಟೀಲ ರಾಷ್ಟ್ರಧ್ವಜಾರೋಹಣಗೈದರು. ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು , ಸಿಬ್ಬಂದಿಗಳು ಭಾಗವಹಿಸಿದರು. ಪುರಸಭೆಯಲ್ಲಿ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಸಮತಾಲೋಕ ಸಮಿತಿ:
ಪಟ್ಟಣದ ಸಮತಾ ಲೋಕ ಶಿಕ್ಷಣ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸೂರ್ಯಕಾಂತ ಗುಡ್ಡೋಡಗಿ, ಜೈನೋದ್ದಿನ್ ಮುಜಾವರ್, ಸಂಜಯ ಪಾಟೀಲ, ನಾಗಣ್ಣಾ ಸಲಗರೆ, ಎಲ್.ಎಸ್.ಬೀದಿ, ಶಿವಪುತ್ರ ಅಲ್ದಿ, ಶ್ರೀಶೈಲ ಬಂಕಾಪುರೆ, ಗಂಗಾಂಬಿಕಾ ಮಂಟಗಿ ಉಪಸ್ಥಿತರಿದ್ದರು.
ಜೀವನಜ್ಯೋತಿ ಸಂಸ್ಥೆ:
ಪಟ್ಟಣದ ಜೀವನಜ್ಯೋತಿ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ಜರುಗಿತು. ಮಾಜಿ ಶಾಸಕ ಸುಭಾಷ ಗುತ್ತೇದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಣಮಂತ ಶೇರಿ, ಅಶೋಕ ರೆಡ್ಡಿ, ಕಲ್ಯಾಣಿ ಸಾವಳಗಿ, ಮಲ್ಲಿಕಾರ್ಜುನ ಬುಕ್ಕೆ, ಅಪ್ಪಾಸಾಹೇಬ ಬಿರಾದಾರ, ಮಲ್ಲಿನಾಥ ತುಕಾಣೆ, ಜ್ಯೋತಿ ವಿಶಾಖ, ಸಿದ್ದರಾಮ ದೋತ್ರೆ ಉಪಸ್ಥಿತರಿದ್ದರು.