ADVERTISEMENT

ನಿರಂತರ ಸಾಹಿತ್ಯ ಚಟುವಟಿಕೆ ನಡೆಯಲಿವೆ- ಹಣಮಂತ ಶೇರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 7:06 IST
Last Updated 15 ಜನವರಿ 2022, 7:06 IST
ಆಳಂದದ ಗುರುಭವನದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ ಶೇರಿ ಅವರನ್ನು ಶಿಕ್ಷಕ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ವಿಶ್ವನಾಥ ಘೋಡಕೆ, ಮಹಾದೇವ ಗುಣಕಿ ಇದ್ದರು
ಆಳಂದದ ಗುರುಭವನದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ ಶೇರಿ ಅವರನ್ನು ಶಿಕ್ಷಕ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ವಿಶ್ವನಾಥ ಘೋಡಕೆ, ಮಹಾದೇವ ಗುಣಕಿ ಇದ್ದರು   

ಆಳಂದ: ‘ಕನ್ನಡ ನಾಡು ನುಡಿ ಅಭಿಮಾನ ಬೆಳೆಸಲು ತಾಲ್ಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆಯಲಿವೆ’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ ಶೇರಿ ಹೇಳಿದರು.

ಕಸಾಪ ತಾಲ್ಲೂಕು ಘಟಕಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗುರುಭವನದಲ್ಲಿ ಶಿಕ್ಷಕ ಗೆಳೆಯರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲರ ಸಹಕಾರದೊಂದಿಗೆ ವಿಚಾರ ಸಂಕಿರಣ, ವಿಚಾರಗೋಷ್ಠಿ ಏರ್ಪಡಿಸಿ ಸಾಹಿತ್ಯ, ಕಲೆ, ಸಂಸ್ಕೃತಿ ಬೆಳೆಸಲು ಆದ್ಯತೆ ನೀಡುವುದಾಗಿ ತಿಳಿಸಿದರು.

ADVERTISEMENT

ಸಿಆರ್‌ಪಿ ಪಂಚಪ್ಪ ಪಾಟೀಲ ಮಾತನಾಡಿದರು. ಶಿಕ್ಷಕರಾದ ನಾಗೇಂದ್ರಪ್ಪ ಗಾಡೆ, ಮಹೇಶ ಕಾಂಬಳೆ, ಮಹಾದೇವ ಗುಣಕಿ, ವಿಶ್ವನಾಥ ಘೋಡಕೆ, ವೆಂಕಟೇಶ ಇಳಿಗಾರ, ಪ್ರಫುಲಕುಮಾರ, ಶ್ರೀನಾಥ, ಅನಿಲಕುಮಾರ ಇದ್ದರು.

ಸಾಹಿತಿ ಚಂದ್ರಶೇಖರ ಪಾಟೀಲ ಅವರ ನಿಧನದ ಹಿನ್ನಲೆ ರಾಜಶೇಖರ ಬಿ.ಇಡಿ ಕಾಲೇಜಿನಲ್ಲಿ ನುಡಿನಮನ ಕಾರ್ಯಕ್ರಮ ಜರುಗಿತು. ಕಸಾಪ ತಾಲ್ಲೂಕು ಅಧ್ಯಕ್ಷ ಹಣಮಂತ ಶೇರಿ ಮಾತನಾಡಿದರು.

ಪ್ರಾಚಾರ್ಯ ಅಶೋಕ ರೆಡ್ಡಿ, ನಾಗೇಂದ್ರ ಚಿಕ್ಕಳ್ಳಿ, ರಾಜಕುಮಾರ ಹರಳಯ್ಯ, ಡಾ.ನಿರ್ಮಾಲಾ ಕಾಮನಳ್ಳಿ, ಮಲ್ಲಿನಾಥ ಗಣಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.