ADVERTISEMENT

ಕಲಬುರಗಿ: ಬಸ್ ನಿಲ್ದಾಣ, ರಸ್ತೆಗಳು ಖಾಲಿಖಾಲಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 3:57 IST
Last Updated 9 ಜನವರಿ 2022, 3:57 IST
ವಾರಾಂತ್ಯ ಕರ್ಫ್ಯೂ ಹಿನ್ನಲೆ ಬಾಗಿಲು ಮುಚ್ಚಿರುವ ಶಹಾಬಾದ್‌ ಪಟ್ಟಣದ ಅಂಗಡಿಗಳು
ವಾರಾಂತ್ಯ ಕರ್ಫ್ಯೂ ಹಿನ್ನಲೆ ಬಾಗಿಲು ಮುಚ್ಚಿರುವ ಶಹಾಬಾದ್‌ ಪಟ್ಟಣದ ಅಂಗಡಿಗಳು   

ಶಹಾಬಾದ್: ವಾರಾಂತ್ಯ ಕರ್ಫ್ಯೂ ಹಿನ್ನಲೆ ಪಟ್ಟಣದಲ್ಲಿ ಪೊಲೀಸ್‌ಇಲಾಖೆ ಕಠಿಣ ನಿರ್ಬಂಧ ಹೇರಿದ್ದರಿಂದ ಶನಿವಾರ ಜನಸಂಚಾರ ವಿರಳವಾಗಿತ್ತು.

ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಅಗತ್ಯ ವಸ್ತುಗಳನ್ನು ಬಿಟ್ಟು ಎಲ್ಲಾ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿಸಲಾಗಿತ್ತು. ನಗರಕ್ಕೆ ಬರುವ ಹಾಗೂ ಬೇರೆಊರಿಗೆ ಹೋಗುವ ಜನರ ಸಂಖ್ಯೆ ಕಡಿಮೆಯಾಗಿತ್ತು. ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಲಾಡ್ಜ್, ಬಾರ್, ರೆಸ್ಟೋರೆಂಟ ಮುಚ್ಚಿದ್ದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ಹೊರಹಾಕಿದರು.

ADVERTISEMENT

ಕೆಲವು ಕಲ್ಯಾಣಮಂಟಪದಲ್ಲಿ ಮದುವೆಗಳು ನಡೆದಿದ್ದು ಬಿಟ್ಟರೇ, ಸಂಪೂರ್ಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.ಸಂಜೆಯಾದಂತೆ ಒಬ್ಬೊಬ್ಬರು ಹೊರಗಡೆ ಬರುವುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.