ADVERTISEMENT

ವಿದ್ಯಾರ್ಥಿಗಳಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 7:12 IST
Last Updated 21 ಜನವರಿ 2022, 7:12 IST
ಅಫಜಲಪುರ ಪೊಲೀಸ್ ಠಾಣೆಗೂ ಒಕ್ಕರಿಸಿದ ಕೊರೊನಾ
ಅಫಜಲಪುರ ಪೊಲೀಸ್ ಠಾಣೆಗೂ ಒಕ್ಕರಿಸಿದ ಕೊರೊನಾ   

ಅಫಜಲಪುರ: ತಾಲ್ಲೂಕಿನಲ್ಲಿ ಗುರುವಾರ ಒಂದೇ ದಿನ 45 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

ಬಡದಾಳ ಶಾಲೆಯಲ್ಲಿ 6, ಗೊಬ್ಬುರ ಶಾಲೆಯಲ್ಲಿ 12, ದೇಸಾಯಿ ಕಲ್ಲೂರ ಶಾಲೆಯ 9 ಮಕ್ಕಳಿಗೆ
ಸೋಂಕು ಇರುವುದು ಧೃಡಪಟ್ಟಿದೆ. ಈಗಾಗಲೇ ನೀಲೂರ ಶಾಲೆಯ 6 ಶಿಕ್ಷಕರಿಗೆ, 5 ಜನ ವಿದ್ಯಾರ್ಥಿಗಳಿಗೆ ಹಾಗೂ ಅಫಜಲಪುರ ಮತ್ತು ರೇವೂರ(ಬಿ) ಪೊಲೀಸ್ ಠಾಣೆಯ ಪಿಎಸ್‌ಐಗಳಿಗೂ ಕೋವಿಡ್ ಧೃಡ ಪಟ್ಟಿರುವ ಬಗ್ಗೆ ವರದಿಯಾಗಿದೆ.

ತಾಲ್ಲೂಕಿನ ಮಾಶಾಳ, ಬಳೂರ್ಗಿ ಚೆಕ್‌ಪೋಸ್ಟ್‌ ಮೂಲಕ ನಿತ್ಯ ದೇವಲಗಾಣಗಾಪುರ ದತ್ತ ದೇವಸ್ಥಾನಕ್ಕೆ ಯಾತ್ರಿಕರು ವಾಹನಗಳ ಮೂಲಕ ತಂಡೋಪತಂಡವಾಗಿ ಬರುತ್ತಿದ್ದಾರೆ. ಯಾವ ವಾಹನಗಳೂ ಮರಳಿ ಹೋಗುತ್ತಿಲ್ಲ, ಕೆಲ ದಿನಗಳಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಗೂ ಕಲ್ಯಾಣ ಕರ್ನಾಟಕದ ಬಸ್ ಸಂಚಾರ ಆರಂಭವಾಗಿದ್ದು, ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಕೋವಿಡ್ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ADVERTISEMENT

ತಾಲ್ಲೂಕಿನಲ್ಲಿ 150 ಸಕ್ರಿಯ ಪ್ರಕರಣಗಳಿದ್ದು 3 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರತ್ನಾಕರ ತೋರಣ ಅವರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.