ಆಳಂದ: ತಾಲ್ಲೂಕಿನ ವಿವಿಧ ಪ್ರೌಢ ಶಾಲೆಗೆ ತೆರಳಿದ ಆರೋಗ್ಯ ಇಲಾಖೆಯ ಸಿಬ್ಬಂದಿ 9ನೇ ಮತ್ತು 10ನೇ ತರಗತಿಯ 3,294 ವಿದ್ಯಾರ್ಥಿಗಳಿಗೆ ಸೋಮವಾರ ಕೋವಿಡ್ ಲಸಿಕೆ ಹಾಕಿದರು.
ಹಲವು ಆರೊಗ್ಯ ಉಪಕೇಂದ್ರಗಳ ಆರೋಗ್ಯ ಸಿಬ್ಬಂದಿ ಬೆಳಿಗ್ಗೆ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿದರು. ಆಧಾರ್ ಕಾರ್ಡ್‌ನಿಂದ ಮಾಹಿತಿ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದರು. ಒಟ್ಟು 47 ಶಾಲೆಗಳಲ್ಲಿ ಲಸಿಕಾಕರಣ ನಡೆದಿದ್ದು, ಪಾಲಕರ ಸಭೆ ಮತ್ತು ಇತರೆ ಕಾರಣದಿಂದ4 ಶಾಲೆಗಳಲ್ಲಿ ಲಸಿಕೆ ನೀಡಲಿಲ್ಲ.
ಆಳಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ– 332, ಹಿರೋಳಿ- 367, ಕಡಗಂಚಿ-391, ಖಜೂರಿ-249, ಕಿಣಿಸುಲ್ತಾನ-240, ಅಂಬಲಗಾ-56, ಬೆಳಮಗಿ-128, ಭೂಸನೂರು-205, ಧಂಗಾಪುರ-115, ಗೋಳಾ-101, ಜಿಡಗಾ-129, ಕೊರಳ್ಳಿ-202, ಮಾಡಿಯಾಳ-70, ಪಡಸಾವಳಿ-261, ಸರಸಂಬಾ-177, ತಡಕಲ-117, ವಿಕೆ ಸಲಗರ-57 ಮತ್ತು ಯಳಸಂಗಿ-87 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು.
ಕೆಮ್ಮು, ನೆಗಡಿ ಮತ್ತಿತರ ರೋಗದ ಲಕ್ಷಣ ಕಂಡು ಬಂದ ಮಕ್ಕಳಿಗೆ ಲಸಿಕೆ ನೀಡಲಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಶೀಲಕುಮಾರ ಅಂಬೂರೆ ತಿಳಿಸಿದರು.
ತಾಲ್ಲೂಕಿನ ಪ್ರೌಢ ಶಾಲೆಯಲ್ಲಿನ ಒಟ್ಟು 7,411 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಮೊದಲ ದಿನ 3,294 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವದು ಉತ್ತಮ ಸಾಧನೆ. ವಿದ್ಯಾರ್ಥಿಗಳು ಮತ್ತು ಪಾಲಕರ ಉತ್ಸಾಹ ಹಾಗೂ ಕಾಳಜಿಯು ಅಭಿಯಾನ ಯಶಸ್ವಿಗೆ ಕಾರಣವಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಶರಣಬಸಪ್ಪ ಗಣಜಲಖೇಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.