ADVERTISEMENT

ಕಲಬುರಗಿ: ರಘೋಜಿ ಕಾಲೇಜಿನಲ್ಲಿ ಲಸಿಕಾಕರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 6:44 IST
Last Updated 15 ಜನವರಿ 2022, 6:44 IST
ಕಲಬುರಗಿಯ ದಾಮೋದರ ರಘೋಜಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು
ಕಲಬುರಗಿಯ ದಾಮೋದರ ರಘೋಜಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು   

ಕಲಬುರಗಿ: ನಗರದ ಹುಮನಾಬಾದ್‌ ರಿಂಗ್ ರಸ್ತೆಯಲ್ಲಿರುವ ದಾಮೋದರ ರಘೋಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ರಘೋಜಿ ಪದವಿಪೂರ್ವ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಈ ಲಸಿಕಾಕರಣ ಆರಂಭಿಸಲಾಯಿತು. ಕಾಲೇಜಿನ ಒಟ್ಟು 246 ವಿದ್ಯಾರ್ಥಿಗಳಲ್ಲಿ 236 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಮೊದಲ ದಿನವೇ ಲಸಿಕೆ ಪಡೆದುಕೊಂಡರು.

ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಡಿ. ರಘೋಜಿ, ಕಾರ್ಯದರ್ಶಿ ಮೀರಾ ಆರ್. ರಘೋಜಿ, ಸದಸ್ಯರಾದ ನಂದಿನಿ ಆರ್. ರಘೋಜಿ, ಕಾಲೇಜಿನ ಕ್ಯಾಂಪ್‍ಸ್ ಕೋಆರ್ಡಿನೇಟ್‍ರ್‍ ಸುಭಾಶ್ಚಂದ್ರ ಕ. ಗಾದಾ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.