ADVERTISEMENT

ಟಿಕಾಯತ್ ಮುಖಕ್ಕೆ ಮಸಿ: ಸಿಪಿಐಎಂ ಎಸ್‌ಯುಸಿಐ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 16:03 IST
Last Updated 30 ಮೇ 2022, 16:03 IST
ಕೆ.ನೀಲಾ
ಕೆ.ನೀಲಾ   

ಕಲಬುರಗಿ: ಬೆಂಗಳೂರಿನಲ್ಲಿ ನಡೆದ ರೈತರ ಸಭೆಯ ಸಂದರ್ಭದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮುಖಕ್ಕೆ ಮಸಿ ಬಳಿದ ಘಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ–ಸಿಪಿಐಎಂ) ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಈ ದಾಳಿಯು ವ್ಯಕ್ತಿಗಳ ಮೇಲೆ ನಡೆಸಿದ್ದಲ್ಲ. ಬದಲಿಗೆ ಭಾರತದ ಹೋರಾಟಗಳ ಮೇಲೆ ನಡೆಸಿದ ದಾಳಿಯಾಗಿದೆ. ಗುಜರಾತ್ ಮಾದರಿಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಗಳು ಕರ್ನಾಟಕವನ್ನು ಕೋಮುದಂಗೆಗೆ ಪ್ರಯೋಗಾಲಯವಾಗಿ ಮಾಡುತ್ತಿವೆ. ಇಂತಹ ಫ್ಯಾಸಿಸ್ಟ್ ನಡೆಗಳ ಹಿಂದೆ ಬಿಜೆಪಿ ಸರ್ಕಾರ ಮತ್ತು ಆರ್‌ಎಸ್‌ಎಸ್‌ನ ಗುಪ್ತ ಅಜೆಂಡಾ ಅಡಗಿದೆ. ದಿನ ನಿತ್ಯ ಕರ್ನಾಟಕವು ಇಂತಹ ವಿಧ್ವಂಸಕ ಕೃತ್ಯದಿಂದ ನರಳುತ್ತಿದೆ. ಸರ್ಕಾರ ಮಾತ್ರ ಕೈ ಕಟ್ಟಿಕೊಂಡು ಕುಳಿತು ಮೌನ ಸಮ್ಮತಿ ಕೊಡುತ್ತಿದೆ. ರಾಜ್ಯದಲ್ಲಿ ಇಂತಹ ಅರಾಜಕತೆ ಸೃಷ್ಟಿಗೆ ಸರ್ಕಾರ ಹೊಣೆಯಾಗಿದೆ. ಬಿಜೆಪಿಗೆ ಸರ್ಕಾರ ನಡೆಸುವ ಯಾವ ಯೋಗ್ಯತೆಯೂ ಇಲ್ಲವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಆರ್‌ಎಸ್ಎಸ್ ಅಜೆಂಡಾ ಜಾರಿ ಮಾಡುವ ವಕ್ತಾರರಂತಾಗಿದ್ದಾರೆ. ಆದ್ದರಿಂದಲೇ ಪ್ರಜಾಪ್ರಭುತ್ವೀಯ ಮೌಲ್ಯಗಳನ್ನೇ ನಾಶ ಮಾಡುವ ಚಟುವಟಿಕೆಗೆ ಬೆಂಬಲವಾಗಿದ್ದಾರೆ’ ಎಂದಿದ್ದಾರೆ.

ಕೂಡಲೇ ದಾಳಿಕೋರರ ಮೇಲೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.