ADVERTISEMENT

‘ಕೆರೆ ಅಳತೆಗೆ ಕಾರ್ಯಪಡೆ ರಚನೆ’: ಸಚಿವ ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 10:07 IST
Last Updated 30 ಡಿಸೆಂಬರ್ 2018, 10:07 IST

ಕಲಬುರ್ಗಿ: ‘ಕಲಬುರ್ಗಿ ಜಿಲ್ಲೆಯಲ್ಲಿ 149, ಯಾದಗಿರಿ ಜಿಲ್ಲೆಯಲ್ಲಿ 291 ಕೆರೆಗಳಿದ್ದು, ಕೆರೆ ಅಳತೆ ಮಾಡಲು ಕಾರ್ಯಪಡೆ ರಚಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಕಲಬುರ್ಗಿಯಲ್ಲಿ 83 ಕೆರೆಗಳನ್ನು ಅಳತೆ ಮಾಡಿಸಲಾಗಿದೆ. ಅವು ಒಟ್ಟು 1,908.81 ಹೆಕ್ಟೇರ್ ವಿಸ್ತೀರ್ಣ ಹೊಂದಿವೆ. ಅದೇ ರೀತಿ ಯಾದಗಿರಿಯಲ್ಲಿ 44 ಕೆರೆಗಳನ್ನು ಅಳತೆ ಮಾಡಿಸಲಾಗಿದ್ದು, 4,570.07 ಹೆಕ್ಟೇರ್ ವಿಸ್ತೀರ್ಣ ಹೊಂದಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT