ಕಮಲಾಪುರ: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಡೊಂಗರಗಾಂವ ಕ್ರಾಸ್ ಬಳಿ ಸೋಮವಾರ ನಡೆದಿದೆ.
ಕಾರಿನಲ್ಲಿ ತೆರಳುತ್ತಿದ್ದ ವಿಜಯಪುರದ ನೌಬಾದ್ ಕಾಲೊನಿ ನಿವಾಸಿ ಬಂದೆನವಾಜ್ ರಸೂಲ್ (48) ಮೃತಪಟ್ಟಿದ್ದಾರೆ. ರುಬಿನಾ, ಯಾಸ್ಮೀನ್, ಅಲೀನಾ, ಅಫ್ಸರ್ ಬೇಗಂ, ಅಕ್ಬರ್ ಹುಸೇನ್, ಮೊಹಮ್ಮದ್ ಅಲಿ ಗಾಯಗೊಂಡಿದ್ದಾರೆ.
ಇವರು ವಿಜಯಪುರದಿಂದ ಹೈದರಾಬಾದ್‌ಗೆ ತೆರಳುತ್ತಿದ್ದರು. ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರು ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮಲಾಪುರ ಪೊಲೀಸ್ ಠಾಣೆ ಪಿಎಸ್‌ಐ ಶೀಲಾ ನಯಮನ್, ಸಿಬ್ಬಂದಿ ಕಿಶನ್ ಜಾಧವ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.