
ಕಲಬುರಗಿ: 2025ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕಡಲೆ, ಜೋಳ, ಗೋಧಿ, ಕುಸುಬೆ, ಭತ್ತ ಹಾಗೂ ನೆಲಗಡಲೆ (ಶೇಂಗಾ) ಬೆಳೆಗಳನ್ನು ಬೆಳೆದಿರುವ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಕೋರಿದ್ದಾರೆ.
ಹಿಂಗಾರು ಹಂಗಾಮಿನ ಮಳೆಯಾಶ್ರಿತ ಕಡಲೆ, ಜೋಳ, ಕುಸುಬೆ ಹಾಗೂ ನೀರಾವರಿ ಜೋಳದ ಬೆಳೆಗೆ ವಿಮೆ ಪಡೆಯಲು ಡಿಸೆಂಬರ್ 1 ಕೊನೆಯ ದಿನವಾಗಿದೆ. ನೀರಾವರಿ ಕಡಲೆಗೆ ಬೆಳೆ ವಿಮೆ ಪಡೆಯಲು ಡಿಸೆಂಬರ್ 15ರ ತನಕ ಅವಕಾಶವಿದೆ. ಮಳೆಯಾಶ್ರಿತ ಗೋಧಿ, ನೀರಾವರಿ ಗೋಧಿಗೆ ಬೆಳೆ ವಿಮೆ ಪಡೆಯಲು ಡಿ.31 ಕೊನೆಯ ದಿನವಾಗಿದೆ.
ಇನ್ನು, ಬೇಸಿಗೆ ಹಂಗಾಮಿನ ನೀರಾವರಿ ಭತ್ತ ಹಾಗೂ ನೆಲಗಡಲೆ(ಶೇಂಗಾ) ಬೆಳೆಗಳಿಗೆ ಬೆಳೆ ವಿಮೆ ಪಡೆಯಲು 2026ರ ಫೆಬ್ರುವರಿ 27ರ ತನಕ ಕಾಲಾವಕಾಶವಿದೆ. ಜಿಲ್ಲೆಯ ರೈತರು ತಮ್ಮ ಹತ್ತಿರದ ಬ್ಯಾಂಕ್‍ಗಳಲ್ಲಿ, ಗ್ರಾಮ ಒನ್ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ಬೆಳೆ ವಿಮೆಗಾಗಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.