ADVERTISEMENT

ಕಲಬುರ್ಗಿ: ತಾಯಿಗೆ ಆಮ್ಲಜನಕಕ್ಕಾಗಿ ಯೋಧನ ಮೊರೆ

ಕಲಬುರ್ಗಿ ತಾಲ್ಲೂಕಿನ ಪಾಣೆಗಾಂವ ಗ್ರಾಮದ ಸಂಜೀವ ಪವಾರ

​ಪ್ರಜಾವಾಣಿ ವಾರ್ತೆ
Published 5 ಮೇ 2021, 16:04 IST
Last Updated 5 ಮೇ 2021, 16:04 IST
ಕಲಬುರ್ಗಿ ತಾಲ್ಲೂಕಿನ ಪಾಣೆಗಾಂವ ಗ್ರಾಮದ ಸಂಜೀವ ಪವಾರ
ಕಲಬುರ್ಗಿ ತಾಲ್ಲೂಕಿನ ಪಾಣೆಗಾಂವ ಗ್ರಾಮದ ಸಂಜೀವ ಪವಾರ   

ಕಲಬುರ್ಗಿ: ತನ್ನ ತಾಯಿಗೆ ಆಮ್ಲಜನಕ ವ್ಯವಸ್ಥೆ ಮಾಡುವಂತೆ ಕೋರಿ ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ನಲ್ಲಿರುವ ತಾಲ್ಲೂಕಿನ ಪಾಣೆಗಾಂವ ಗ್ರಾಮದ ಯೋಧ ಸಂಜೀವ ಪವಾರ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಕಾಶ್ಮೀರದಿಂದಲೇ ವಿಡಿಯೊ ಮಾಡಿ ತನ್ನ ತಾಯಿಗೆ ಸಹಾಯ ಮಾಡಲು ಮುಂದೆ ಬನ್ನಿ ಎಂದು ಬೇಡಿಕೊಂಡಿದ್ದಾರೆ. ತಾಯಿ ಸಂಕಷ್ಟ ಹೇಳಿ ಕಣ್ಣೀರು ಹಾಕಿದ್ದಾರೆ. ಸಹಾಯ ಮಾಡುವವರು 90156 21818 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಈ ಕುರಿತು 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಂಜೀವ, 'ಮೂರು ದಿನಗಳ ಹಿಂದೆ ನನ್ನ ತಾಯಿ ನಿರ್ಮಲಾ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಅವರ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದು, ಜನಪ್ರತಿನಿಧಿಗಳು, ಸಮಾಜ ಸೇವಕರು ಸಹಾಯ ಮಾಡಬೇಕು. ತಕ್ಷಣಕ್ಕೆ ನನಗೆ ಇಲ್ಲಿಂದ ಬರುವುದು ಆಗುತ್ತಿಲ್ಲ' ಎಂದರು.

ADVERTISEMENT

'ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ವೈದ್ಯರ ತಂಡವೊಂದು ಗ್ರಾಮಕ್ಕೆ ತೆರಳಿದೆ. ಆದರೆ, ರಾತ್ರಿಯಾದರೂ ಅಂಬುಲೆನ್ಸ್ ಬಂದಿರಲಿಲ್ಲ. ನನ್ನ ತಾಯಿಯ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಸಹಾಯಕ್ಕೆ ಬರಬೇಕು' ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.