ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಕಲಬುರಗಿ: ‘ಶೈಕ್ಷಣಿಕ ಕ್ಷೇತ್ರ ಅಧ್ಯಯನ ಪ್ರವಾಸದ ವೇಳೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಜೂನ್ 19ರಂದು ಬೀದರ್ ಜಿಲ್ಲೆ ಘೀಯಾಸುದ್ದಿನ್ ತುಘಲಕ್ ಮಸೀದಿಗೆ ಬಲವಂತವಾಗಿ ಕರೆದೊಯ್ದು, ವಿದ್ಯಾರ್ಥಿನಿಯರಿಗೆ ಹಿಜಾಬ್ (ತಲೆ ಮೇಲೆ ಸೆರಗು) ಧರಿಸುವಂತೆ ಒತ್ತಾಯಿಸಲಾಗಿದೆ’ ಎಂದು ಹೈದರಾಬಾದ್‌ನ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ ಆರೋಪಿಸಿದೆ.
‘ಪ್ರೊ.ಅಬ್ದುಲ್ ಮಜೀದ್ ಅವರು ಇತಿಹಾಸ ವಿಭಾಗದ ಬಿ.ಎ ಪ್ರಥಮ ವರ್ಷ ದ್ವಿತೀಯ ಸೆಮಿಸ್ಟರ್‌ನ ಹಲವು ವಿದ್ಯಾರ್ಥಿಗಳಿಗೆ ಮಸೀದಿಗೆ ಕರೆದೊಯ್ದಿದ್ದಾರೆ. ಒಳಪ್ರವೇಶಿಸಲು ಹಿಜಾಬ್ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸಲಾಗಿದೆ. ಇದು ಧಾರ್ಮಿಕ ಆಚರಣೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಯತ್ನವಾಗಿದ್ದು, ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು’ ಎಂದು ಫೋರಂನ ಪ್ರಧಾನ ಕಾರ್ಯದರ್ಶಿ ಎ.ಎಸ್.ಸಂತೋಷ ಅವರು ವಿ.ವಿ.ಯ ಕುಲಪತಿ ಹಾಗೂ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.
‘ಪ್ರವಾಸದ ವೇಳೆ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಹೇಳಿಲ್ಲ. ದರ್ಗಾದವರ ಸೂಚನೆಯಂತೆ ತಲೆಯ ಮೇಲೆ ಸೆರಗು ಹೊದ್ದುಕೊಳ್ಳಲು ಹೇಳಲಾಗಿತ್ತು’ ಎಂದು ಕರ್ನಾಟಕ ಕೇಂದ್ರೀಯ ವಿ.ವಿ ಸಹಾಯಕ ಪ್ರಾಧ್ಯಾಪಕ ಅಬ್ದುಲ್ ಮಜೀದ್ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.