ADVERTISEMENT

ಕಲಬುರಗಿ | ಡಿಸಿಸಿ ಬ್ಯಾಂಕ್‌ ಚುನಾವಣೆ: 11 ನಾಮಪತ್ರ ವಾಪಸ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:58 IST
Last Updated 4 ನವೆಂಬರ್ 2025, 6:58 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ಕಲಬುರಗಿ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಚುನಾವಣೆಯ ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಸೋಮವಾರ 11 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್‌ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ ಬಿ. ಕುದರಿ ತಿಳಿಸಿದ್ದಾರೆ.

ನಾಮಪತ್ರ ಹಿಂಪಡೆದವರು: ಬಾಬುಗೌಡ ಪಾಟೀಲ (‘ಎ’ ವರ್ಗ ಆಳಂದ ಕ್ಷೇತ್ರ), ರೇವಪ್ಪ ಚಂದ್ರಪ್ಪ (‘ಎ’ ವರ್ಗ ಚಿಂಚೋಳಿ), ಅರುಣಕುಮಾರ ಬಸವರಾಜ, ರಾಜಕುಮಾರ ಕೋಟಿ (‘ಎ’ ವರ್ಗ ಕಲಬುರಗಿ), ಚನ್ನಬಸವ ಜಕ್ಕನಗೌಡರು, ಸಂಗನಬಸವಪ್ಪ ನವಲಗುಡ್ಡ (‘ಎ’ ವರ್ಗ ಸುರಪುರ), ಅಜಯರೆಡ್ಡಿ ಅಶೋಕರೆಡ್ಡಿ (‘ಎ’ ವರ್ಗ ಯಾದಗಿರಿ), ರವೀಂದ್ರಕುಮಾರ್‌ ಕಲ್ಲೂರ (‘ಬಿ’ ವರ್ಗದ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಹಾಗೂ ಇತರೆ ಮಾರಾಟ ಸಹಕಾರ ಸಂಘಗಳು), ಕಲ್ಯಾಣಪ್ಪ ಕೋಬಾಳ, ಮೊಹ್ಸಿನಾ ತಕದೀಸ್‌, ವೈಜನಾಥ ತಡಕಲ್‌ (‘ಡಿ’ ವರ್ಗದ ಎಬಿಸಿ ಸಹಕಾರ ಸಂಘಗಳನ್ನು ಹೊರತುಪಡಿಸಿ ಇನ್ನಿತರ ಸಹಕಾರ ಸಂಘಗಳ ಕ್ಷೇತ್ರಗಳು).

ADVERTISEMENT

ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನ.9ರಂದು ಚುನಾವಣೆ ನಡೆಯಲಿದ್ದು, ಮತದಾನ ಮುಗಿದ ಬಳಿಕ ವಿಜೇತರ ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.