ಸೇಡಂ: ‘ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರನ್ನು ಅವಮಾನಿಸಿದ ಗಂಗಾಧರ ನಾಯಕ ಹಿರೇಗುತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಶ್ರೀ ಮಾದಾರ ಚೆನ್ನಯ್ಯ ಗುರುಪೀಠ ಸೇವಾ ಸಮಿತಿ ಜಿಲ್ಲಾ ಪ್ರಮುಖ ವಿಜಯಕುಮಾರ ಆಡಕಿ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏ.14 ರಂದು ಹೊನ್ನಾವರದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಸ್ವಾಮೀಜಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ ರಾಜಕೀಯ ನಿಲುವನ್ನು ಬಹಿರಂಗವಾಗಿ ಟೀಕಿಸಿ ಮುಜುಗರಕ್ಕೀಡುಮಾಡುವ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಭ್ರಷ್ಟಾಚಾರವನ್ನು ಮಾಡುತ್ತಾ, ದಲಿತರಿಗೂ ಮತ್ತು ಮೇಲ್ವರ್ಗದವರಿಗೂ ಅನ್ಯಾಯ ಮಾಡುತ್ತಿದ್ದೀರಿ ಎಂದು ಚಿತ್ರದುರ್ಗ ಮತ್ತು ದಲಿತ ಸಮುದಾಯದವರ ಮೇಲೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸ್ವಾಮೀಜಿಗಳನ್ನು ಅಪಮಾನ ಮಾಡಿದ್ದಾರೆ. ಇದು ಖಂಡನೀಯವಾಗಿದೆ’ ಎಂದರು.
‘ಇದರಿಂದ ಸ್ವಾಮೀಜಿಯವರ ಭಕ್ತರ ಮನಸ್ಸಿಗೆ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯಿದೆಯಡಿ ದೂರು ದಾಖಲಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸಣ್ಣ ರನ್ನೆಟ್ಲಾ, ರವಿಕುಮಾರ ಗುತ್ತೆದಾರ, ರಾಮು ಕಣೇಕಲ್, ಅನಂತಪ್ಪ ಮೋತಕಪಲ್ಲಿ, ಭೀಮಾಶಂಕರ ಕೊರವಿ, ಹಣಮಂತ ಭರತನೂರ, ಸುರೇಶ ಇವಣಿ, ಬಸವರಾಜ ಕಾಳಗಿ, ಅಶೋಕ ಕೊಡದುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.