ADVERTISEMENT

ಕಲಬುರಗಿ: ಸಿಎಂ ಕಾರಿನೊಳಗೆ‌ ಮನವಿ ಪತ್ರ ಎಸೆದ ಕೋಲಿ ಸಮುದಾಯದ ಮುಖಂಡ ?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 7:18 IST
Last Updated 17 ಸೆಪ್ಟೆಂಬರ್ 2022, 7:18 IST
ಕೋಲಿ ಸಮುದಾಯದ ಮುಖಂಡರೊಬ್ಬರು ‌ಸಿ.ಎಂ ಕಾರಿನೊಳಗೆ ಮನವಿ ಪತ್ರ ಎಸೆದ ದೃಶ್ಯ
ಕೋಲಿ ಸಮುದಾಯದ ಮುಖಂಡರೊಬ್ಬರು ‌ಸಿ.ಎಂ ಕಾರಿನೊಳಗೆ ಮನವಿ ಪತ್ರ ಎಸೆದ ದೃಶ್ಯ   

ಕಲಬುರಗಿ: ತಳವಾರ, ಕೋಲಿ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಕೋರಿದರು ಎನ್ನಲಾದ ಪತ್ರವನ್ನು ಮುಖಂಡರೊಬ್ಬರು ಕಾರಿನೊಳಗೆ ಕುಳಿತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಎಸೆದರು.

ಕಲ್ಯಾಣ ಕರ್ನಾಟಕ ಅಮೃತ‌ ಮಹೋತ್ಸವ ಪ್ರಯುಕ್ತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಮುಖ್ಯಮಂತ್ರಿಗಳು ನೆರೆದವರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಕಪ್ಪು ಬಟ್ಟೆ ಪ್ರದರ್ಶನದಿಂದಾಗಿ ಭಾಷಣವನ್ನು ‌ಮೊಟಕುಗೊಳಿಸಿ, ಅಲ್ಲಿಂದ ನೇರವಾಗಿ ಪರೇಡ್ ಮೈದಾನದತ್ತ ತೆರಳುತ್ತಿದ್ದರು.

ಮಾರ್ಗ ಮಧ್ಯದ ಕನ್ನಡ ಭವನ ಮುಂಭಾಗದಲ್ಲಿ ಪೊಲೀಸ್ ವಾಹನದೊಳಗೆ ಕುಳಿತಿದ್ದವರು ಕಿಟಕಿ, ಬಾಗಿಲಿನಿಂದ ಹೊರ ಇಣುಕಿ ಧಿಕ್ಕಾರ ಕೂಗಿದರು. ಈ ವೇಳ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಮುಖ್ಯಮಂತ್ರಿಗಳ ಕಾರು‌ ನಿಧಾನವಾಗಿ ಚಲಿಸುತ್ತಿತ್ತು. ಜನರ ಮಧ್ಯದಿಂದ ಕೆಲವು ಸಮುದಾಯದ ಮುಖಂಡರೊಬ್ಬರು ‌ಸಿ.ಎಂ ಕಾರಿನೊಳಗೆ ಮನವಿ ಪತ್ರ ಎಸೆದರು. ತಕ್ಷಣವೇ ಪೊಲೀಸರು ಆತನನ್ನು ‌ವಶಕ್ಕೆ ಪಡೆದರು.

ADVERTISEMENT

ಕೋಲಿ ಸಮುದಾಯದ ಕೆಲವರು ಮನವಿ ಪತ್ರ ಎಸೆದದ್ದು ನಮ್ಮವರು ಎಂದರೆ ಮತ್ತೆ ಕೆಲವರು, ಆತ ನಮ್ಮವರು ಅಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.