ADVERTISEMENT

ಕರೇಕಲ್ ತಾಂಡಾ: ಮುಖ್ಯಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 16:05 IST
Last Updated 10 ಮಾರ್ಚ್ 2025, 16:05 IST
ಶಶಿಕಾಂತ
ಶಶಿಕಾಂತ   

ಕಾಳಗಿ: ಪಟ್ಟಣ ಹೊರವಲಯದ ಕರೇಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಶಿಕಾಂತ ಅವರನ್ನು ಅಮಾನತುಗೊಳಿಸಿ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಆದೇಶ ಹೊರಡಿಸಿದ್ದಾರೆ.

‘ಶಿಕ್ಷಕ ಶಾಲಾ ಅವಧಿಯಲ್ಲಿ ಮದ್ಯಪಾನ ಮತ್ತು ಸಿಗರೇಟು ಸೇವನೆ ಮಾಡುತ್ತಿದ್ದರು. ಶಾಲಾ ಕರ್ತವ್ಯಕ್ಕೆ ಮನಸ್ಸಿಗೆ ಬಂದ ಸಮಯಕ್ಕೆ ಹಾಜರಾಗುತ್ತಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಕುರಿತು ‘ಪ್ರಜಾವಾಣಿ’ಯ ಮಾ.8ರ ಸಂಚಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. 

‘ಬೇಜವಾಬ್ದಾರಿಯಿಂದ ವರ್ತಿಸಿ ಕರ್ತವ್ಯಲೋಪವೆಸಗಿ ಇಲಾಖೆಗೆ ಮುಜುಗರವನ್ನುಂಟು ಮಾಡಿದ್ದಾರೆ. ಒಬ್ಬ ಸರ್ಕಾರಿ ನೌಕರನಲ್ಲದಂತೆ ನಡೆದುಕೊಂಡಿರುವ ಆರೋಪದ ಮೇರೆಗೆ, ವಿಚಾರಣೆ ಕಾಯ್ದಿರಿಸಿ ಮಾರ್ಚ್ 8ರಿಂದ ಜಾರಿಗೆ ಬರುವಂತೆ ಪ್ರಭಾರ ಮುಖ್ಯಶಿಕ್ಷಕ ಶಶಿಕಾಂತ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ’ ಎಂದು ಬಿಇಒ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.